ಪಲಿಮಾರು ಪರ್ಯಾಯ ವಿಜಯಾ ಬ್ಯಾಂಕ್‌ನಿಂದ ಹಸಿರು ಕಾಣಿಕೆ ಅರ್ಪಣೆ

ಉಡುಪಿ, ಜ.11: ಶ್ರೀ ಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ವಿಜಯಾ ಬ್ಯಾಂಕಿನ ಪ್ರಾದೇಶಿಕ ವಲಯ ಕಚೇರಿಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ನಿವೃತ್ತ ಸಿಬ್ಬಂದಿಗಳು ಗುರುವಾರ ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಹೊರೆಕಾಣಿಕೆಯನ್ನು ತಂದು ಸಮರ್ಪಿಸಿದರು.
ಕೊನೆಯಲ್ಲಿ ಇವರೆಲ್ಲರೂ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಬ್ಯಾಂಕಿನ ಡಿಜಿಎಂ ಹಾಗೂ ರೀಜನಲ್ ಮೆನೇಜರ್ ಎಂ.ಜೆ.ನಾಗರಾಜ್, ಸೌಮ್ಯ ನಾಗರಾಜ್, ನಿವೃತ ರೀಜನಲ್‌ಮೆನೇಜರ್ ಶಾಲಿನಿ ಶೆಟ್ಟಿ, ಎಜಿಎಂ ಚಿದಾನಂದ ಶೆಟ್ಟಿ, ನಿವೃತ ಅಧಿಕಾರಿಗಳಾದ ರಮೇಶ ಶೆಟ್ಟಿ, ಉಡುಪಿ ಶಾಖೆ ಪ್ರಬಂಧಕ ಹರ್ಷಿತ್ ಪೂಂಜಾ, ಬ್ರಹ್ಮಾವರ ಶಾಖೆಯ ಪ್ರಬಂಧಕ ಜಿನತ್ ಕುಮಾರ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಲ್ಲದೇ ಪಲಿಮಾರುಶ್ರೀಗಳ ಪರ್ಯಾಯಕ್ಕೆ ಇಂದು ಬೈಕಾಡಿ, ಬ್ರಹ್ಮಾವರ, ಕೊಕ್ಕರ್ಣೆ, ಬಾರಕೂರು, ಹೇರೂರು, ಚೇರ್ಕಾಡಿ ಗ್ರಾಮಗಳ ಭಕ್ತರು ಹೊರೆಕಾಣಿಕೆಯನ್ನು ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ತಂದು ಸಮರ್ಪಿ ಸಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಸುರೇಶ್ ಶೆಟ್ಟಿ ಹಾವಂಜೆ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಶಂಕಯ್ಯ ಶೆಟ್ಟಿ, ಸುಂದರ ಪೂಜಾರಿ ಬ್ರಹ್ಮಾವರ, ರಾಜು ಬಂಗೇರ, ರತ್ನಾಕರ ಶೆಟ್ಟಿ ಚೇರ್ಕಾಡಿ, ಹರೀಶ ಪೂಜಾರಿ, ಚಂದ್ರಶೇಖರ ಶೆಟ್ಟಿ ನಂಚಾರು, ಅವಿನಾಶ್ ಉಪ್ಪೂರು, ಅನಿಲ್ ಪೇತ್ರಿ ಮುಂತಾದವರು ಉಪಸ್ಥಿತರಿದ್ದರು.







