ಮಂಗಳೂರು: ‘ಅಪರಾಧ ವರದಿಗಾರಿಕೆ’ ಕುರಿತ ಉಪನ್ಯಾಸ

ಮಂಗಳೂರು, ಜ. 11: ಹಂಪನಕಟ್ಟ ವಿಶ್ವದ್ಯಾನಿಲಯ ಕಾಲೇಜಿನ ಮಾಧ್ಯಮ ವೇದಿಕೆ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಪರಾಧ ವರದಿಗಾರಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಶಿವರಾಮ ಕಾರಂತ ಭವನದಲ್ಲಿ ನಡೆಯಿತು.
ಉಪನ್ಯಾಸ ಅತಿಥಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಆರ್.ಸಿ.ಭಟ್ ಮಾತನಾಡಿ, ಅಪರಾಧ ವರದಿಗಾರಿಕೆ ಮಾಡುವಾಗ ಜಾಗರೂಕತೆ ಅಗತ್ಯ. ಸತ್ಯಾಸತ್ಯತೆಯನ್ನು ತಿಳಿದು ವರದಿ ಮಾಡಬೇಕಾಗುತ್ತದೆ. ಕಾನೂನು ಚೌಕಟ್ಟಿನಡಿಯಲ್ಲಿ ಕೆಲಸ ಮಾಡಬೇಕು. ಅಪರಾಧ ವರದಿಗಾರನಿಗೆ ಮುಖ್ಯವಾಗಿ ಕಾನೂನ ಅರಿವು ಇರಬೇಕು ಎಂದರು.
ಮಾಧ್ಯಮಗಳು ಇಂದಿಗೂ ಭಿನ್ನ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿವೆ. ಓದುಗನ ಮನಸ್ಸನ್ನು ಪತ್ರಿಕೆಗಳು ಅರಿತು ಕೆಲಸ ಮಾಡಯುತ್ತಿವೆ ಎಂದು ಆರ್.ಸಿ.ಭಟ್ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ. ಅಧ್ಯಕ್ಷತೆ ವಹಿಸಿದ್ದರು ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಬದುಕಲ್ಲಿ ಬದಲಾವಣೆ ಮತ್ತು ಆಶಾಭಾವನೆ ಇಟ್ಟುಕೊಂಡು ಹೆಜ್ಜೆ ಇಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಭಾರ ಮುಖ್ಯಸ್ಥ ಡಾ.ಗಣಪತಿ ಗಾಡ, ಅತಿಥಿ ಉಪನ್ಯಾಸಕ ಮಹಾಂತೇಶ್ ರೇಮಠ್, ದೀಪ್ತಿ, ಮಾಧ್ಯಮ ವೇದಿಕೆ ಕಾರ್ಯದರ್ಶಿ ಭರತ್ ಉಪಸ್ಥಿತರಿದ್ದರು.ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಸ್ಫೂರ್ತಿ ಸ್ವಾಗತಿಸಿದರು. ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ತೇಜಶ್ರೀ ಕಾರ್ಯಕ್ರಮ ನಿರೂಪಿಸಿದರು.







