ಜ.12: ದೀಪಕ್ ರಾವ್-ಬಶೀರ್ ಹತ್ಯೆಗೆ ಖಂಡನಾ ಸಭೆ
ಮಂಗಳೂರು, ಜ.11: ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಸಹಯೋಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮತ್ತು ಬಶೀರ್ ಅವರಿಗೆ ಸಂತಾಪ ಸೂಚನೆ ಮತ್ತು ಹತ್ಯೆಯ ವಿರುದ್ಧ ಖಂಡನಾ ಸಭೆಯು ಜ.12ರಂದು ಅಪರಾಹ್ನ 3ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಸಾದುದ್ದೀನ್ ಸಾಲಿಹ್ ವಹಿಸಲಿದ್ದು, ಹಾಜಿ ಹಮೀದ್ ಕಂದಕ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿವಿಧ ಸಂಘಟನೆಗಳ ಮುಖಂಡರಾದ ಅನೀಸ್ ಕೌಸರಿ, ಶಾಫಿ ಸಅದಿ, ಯಾಸಿರ್ ಹಸನ್, ರಫೀವುದ್ದಿನ್ ಕುದ್ರೋಳಿ, ಕೆ. ಅಶ್ರಫ್, ಬಿ.ಎಚ್. ಖಾದರ್ ಬಂಟ್ವಾಳ, ಹನೀಫ್ ಖಾನ್, ಮುಸ್ತಫಾ ಕೆಂಪಿ, ಮುಹಮ್ಮದ್ ಕುಂಞಿ ವಿಟ್ಲ, ಕಣಚೂರು ಮೋನು, ಮುಮ್ತಾಝ್ ಅಲಿ, ರಶೀದ್ ಹಾಜಿ ಉಳ್ಳಾಲ, ಹಮೀದ್ ಕುದ್ರೋಳಿ, ಅಮೀರ್ ತುಂಬೆ, ಶಾಫಿ ಬೆಳ್ಳಾರೆ, ಇಕ್ಬಾಲ್ ಮುಲ್ಕಿ, ಅಲಿ ಹಸನ್, ಜಲೀಲ್ ಕೃಷ್ಣಾಪುರ, ನವಾಝ್ ಉಳ್ಳಾಲ, ಹನೀಫ್ ಹಾಜಿ ಬಂದರ್, ಅಬ್ದುಲ್ ಲತೀಫ್ ಕುದ್ರೋಳಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





