ಶಬರಿಮಲೆಯಿಂದ ಬಾನುಲಿ ವೀಕ್ಷಕ ವಿವರಣೆ
ಮಂಗಳೂರು, ಜ.11: ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಇದೇ ಮೊದಲ ಬಾರಿಗೆ ಜ.14ರಂದು ಶಬರಿಮಲೆ ಸನ್ನಿಧಾನದಿಂದ ಮಕರಜ್ಯೋತಿ ಉತ್ಸವವನ್ನು ನೇರಪ್ರಸಾರವಾಗಲಿದೆ.
ಈಗಾಗಲೇ ತುಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿತ್ತರವಾಗುತ್ತಿದ್ದ ನೇರಪ್ರಸಾರವನ್ನು ಈ ಬಾರಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿತ್ತರಿಸಲು ದಕ್ಷಿಣ ವಲಯ ಪ್ರಾದೇಶಿಕ ಮಹಾನಿರ್ದೇಶಕರು ನಿರ್ಧರಿಸಿದ್ದಾರೆ. ಅದರಂತೆ ಜ.14ರಂದು ಸಂಜೆ 5:30ರಿಂದ 6:35ರವರೆಗೆ ನೇರ ಪ್ರಸಾರವಿದ್ದು ಈ ಮಧ್ಯೆ 6:05ರ ಇಂಗ್ಲಿಷ್ ಹಾಗೂ 6:10ರ ಸಂಸ್ಕೃತ ಸುದ್ದಿ ಪ್ರಸಾರಕ್ಕಾಗಿ ಮಾತ್ರ ಬಿಡುವು ನೀಡಲಾಗಿದೆ.
ಮಕರ ಜ್ಯೋತಿ ಉತ್ಸವದ ಕನ್ನಡ ವೀಕ್ಷಕ ವಿವರಣೆಯ ಜವಾಬ್ದಾರಿಯನ್ನು ಮಂಗಳೂರು ಆಕಾಶವಾಣಿ ಕೇಂದ್ರಕ್ಕೆ ನೀಡಲಾಗಿದ್ದು, ವೀಕ್ಷಕ ವಿವರಣೆಗಾಗಿ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಮತ್ತು ರಾಧಾಕೃಷ್ಣ ಅಡ್ಯಂತಾಯ ಅವರನ್ನು ನಿಯೋಜಿಸಲಾಗಿದೆ ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ತಿಳಿಸಿದ್ದಾರೆ.
Next Story





