‘ಮೊಹ್ತಿಶಾಂ’ಗೆ ಎಸಿಸಿಇ(ಐ) ಅಲ್ಟ್ರಾಟೆಕ್ ಪ್ರಶಸ್ತಿ

ಮಂಗಳೂರು, ಜ.11: ಮೊಹ್ತಿಶಾಂ ಕಾಂಪ್ಲೆಕ್ಸಸ್ ಪ್ರೈವೇಟ್ ಲಿಮಿಟೆಡ್‌ನ ಮಹತ್ತರ ಯೋಜನೆಗಳಲ್ಲಿ ಒಂದಾದ ‘ಐವರಿ ಟವರ್’ ಪ್ರತಿಷ್ಠಿತ ಕನ್‌ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಶನ್ (ಎಸಿಸಿಇ ಐ) ಮಂಗಳೂರು ಅಲ್ಟ್ರಾಟೆಕ್ ಪ್ರಶಸ್ತಿಗೆ ಪಾತ್ರವಾಗಿದೆ.
ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸಿಸಿಇ(ಐ)ನ ಮಂಗಳೂರು ಘಟಕದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ಎಂ.ನರೇಂದ್ರ ಹಾಗೂ ಅಲ್ಟ್ರಾಟೆಕ್ ಸಿಮೆಂಟ್‌ನ ರೀಜನಲ್ ಮುಖ್ಯಸ್ಥ ನಾಗೇಶ್ ಪುಟ್ಟಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.
ಅತ್ಯುತ್ತಮವಾಗಿ ನಿರ್ಮಾಣವಾದ ಕಾಂಕ್ರಿಟ್ ಕಟ್ಟಡ ವಿಭಾಗದಲ್ಲಿ ಐವರಿ ಟವರ್‌ಗೆ ಈ ಪ್ರಶಸ್ತಿ ಲಭ್ಯವಾಗಿದ್ದು, ಮೊಹ್ತಿಶಾಂ ಕಾಂಪ್ಲೆಕ್ಸಸ್ ಪ್ರೈ. ಲಿ.ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಂ. ಸೌದ್ ಪ್ರಶಸ್ತಿ ಸ್ವೀಕರಿಸಿದರು.
ಈ ಪ್ರಶಸ್ತಿಗಾಗಿ ದ.ಕ., ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ 200 ಅರ್ಜಿಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ ಐವರಿ ಟವರ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫಳ್ನೀರ್‌ನಲ್ಲಿರುವ ಐವರಿ ಟವರ್, ಬಹುಮಹಡಿ ವಸತಿಯುತ ಕಾಂಪ್ಲೆಕ್ಸ್ ಆಗಿದ್ದು, ಮೊಹ್ತಿಶಾಂ ಪ್ರೈ.ಲಿ. ತನ್ನ ಅಸ್ತಿತ್ವದ 25ನೆ ವರ್ಷದ ಅಂಗವಾಗಿ ಈ ಕಟ್ಟಡ ಸಂಕೀರ್ಣವನ್ನು ನಿರ್ಮಿಸಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸಿಸಿಇ (ಐ) ಮಂಗಳೂರು ಚಾಪ್ಟರ್‌ನ ಅನಿಲ್ ಸೆಬಾಸ್ಟಿಯನ್ ಡಿಸೋಜ, ದಕ್ಷಿಣ ವಿಭಾಗದ ಅಧ್ಯಕ್ಷ ವಿಜಯ್ ವಿಷ್ಣು ಮಯ್ಯ, ಕಾರ್ಯದರ್ಶಿ ಚಂದ್ರ ಮೌಲೀಶ್ವರ್ ಮೊದಲಾದವರು ಉಪಸ್ಥಿತರಿದ್ದರು.







