ಬೆದ್ರೋಡಿ ಬದ್ರಿಯಾ ಜುಮಾ ಮಸೀದಿ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

ಮಹಮ್ಮದ್ ಹಾಜಿ, ಆದಂ ಹಾಜಿ, ಫಾರೂಕ್,
ಉಪ್ಪಿನಂಗಡಿ, ಜ. 12: ಬದ್ರಿಯಾ ಜುಮಾ ಮಸೀದಿ, ದರ್ಗಾ ಶರೀಪ್ ಮತ್ತು ಬದುರುಲ್ ಹುದಾ ಮದ್ರಸ ಬೆದ್ರೋಡಿ ಇದರ ನೂತನ ಸಾಲಿನ ಅಧ್ಯಕ್ಷರಾಗಿ ಆದಂ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಹಾಗೂ ಗೌರವಾಧ್ಯಕ್ಷರಾಗಿ ಮುಹಮ್ಮದ್ ಹಾಜಿ ಪುನರಾಯ್ಕೆಯಾಗಿದ್ದಾರೆ.
ಬದ್ರಿಯಾ ಜುಮಾ ಮಸೀದಿ ಬೆದ್ರೋಡಿ ಇದರ ಖತೀಬ್ ಇಬ್ರಾಹಿಂ ಖಲೀಲ್ ದಾರಿಮಿ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಕೆ.ಎಂ.ಅಶ್ರಫ್, ಜೊತೆ ಕಾರ್ಯದರ್ಶಿಯಾಗಿ ಶುಕೂರು, ಕೋಶಾಧಿಕಾರಿಯಾಗಿ ಹಮೀದ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹನೀಫ್ ಪೆರಿಯೆಡ್ಕ, ಉಮ್ಮರ್ ಎಸ್.ಎ., ಅಬೂಬಕರ್ ಬಿ.ಕೆ., ರಫೀಕ್, ಅಬ್ಬಾಸ್ ಹಾಜಿ, ಅಬ್ದುಲ್ ರಹಿಮಾನ್, ಬಶೀರ್, ಅಶ್ರಫ್ ಎಂ., ರಶೀದ್, ನವಾಝ್ ಹಾಗೂ ಅಶ್ರಫ್ ಪಾಣೆಕ್ಕಲ್ ಆಯ್ಕೆಯಾಗಿದ್ದಾರೆ.
Next Story





