ಶ್ರೀಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಹೊರೆ ಕಾಣಿಕೆ

ಉಡುಪಿ, ಜ. 12: ಶ್ರೀಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ 'ಉಡುಪಿ ಜಿಲ್ಲಾ ಸಮಸ್ತ ಮುಸ್ಲಿಂ' ಶುಕ್ರವಾರ ಹಸಿರು ಹೊರೆ ಕಾಣಿಕೆಯನ್ನು ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು.
ವಾಹನಗಳಲ್ಲಿ ಅಕ್ಕಿ, ಕುಂಬಳಕಾಯಿ, ಸೀಯಾಳ, ಬೆಲ್ಲ, ಸಕ್ಕರೆ, ಬಾಳೆಹಣ್ಣು ಹಾಗೂ ಇತರ ವಸ್ತುಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಪರ್ಯಾಯದ ಉಗ್ರಾಣಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹಾಜಿ ಅಬೂಬಕರ್ ಪರ್ಕಳ, ಹಂಝತ್ ಕೋಡಿ, ಮುಹಮ್ಮದ್ ಆರೀಫ್, ಅನ್ಸಾರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
Next Story





