ಶಿವಯೋಗಿ ಶ್ರೀಸಿದ್ಧರಾಮ ಜಯಂತಿ
ಉಡುಪಿ, ಜ.12: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ನಳಂದ ಸಭಾಭವನದಲ್ಲಿ ಜ.16ರಂದು ಬೆಳಗ್ಗೆ 10:30ಕ್ಕೆ ಶಿವಯೋಗಿ ಶ್ರೀ ಸಿದ್ಧರಾಮ ಜಯಂತಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿಸಲಿದ್ದಾರೆ. ಕಾಲೇಜು ಉಪನ್ಯಾಸಕ ಡಾ. ರಾಜೇಂದ್ರ ಎಸ್ ನಾಯಕ್ ಶಿವಯೋಗಿ ಶ್ರೀ ಸಿದ್ದರಾಮರ ಕುರಿತು ವಿಶೇಷ ಉಪನ್ಯಾಸ ನಿೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ
Next Story





