ಸಿಡ್ನಿ ಟೆನಿಸ್ ಟೂರ್ನಿ: ಕೆರ್ಬರ್ ಫೈನಲ್ಗೆ
ಸಿಡ್ನಿ, ಜ.12: ವಿಶ್ವದ ಮಾಜಿ ನಂ.1 ಆಟಗಾರ್ತಿ ಏಂಜೆಲಿಕ್ ಕೆರ್ಬರ್ ಸಿಡ್ನಿ ಇಂಟರ್ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ಕೆರ್ಬರ್ ಇಟಲಿಯ ಕ್ವಾಲಿಫೈಯರ್ ಕಾಮಿಲಾ ಗಿಯೊರ್ಗಿ ಅವರನ್ನು 6-2, 6-3 ನೇರ ಸೆಟ್ಗಳಿಂದ ಮಣಿಸಿದ್ದಾರೆ. 100ನೇ ರ್ಯಾಂಕಿನ ಆಟಗಾರ್ತಿ ಕಾಮಿಲಾ ಟೂರ್ನಿಯ ಮೊದಲ ಸುತ್ತಿನಲ್ಲಿ ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ಸ್ರನ್ನು ಮಣಿಸಿದರೆ, ಅಂತಿಮ-8ರ ಹಂತದಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು 6-1, 6-2 ನೇರ ಸೆಟ್ಗಳಿಂದ ಸೋಲಿಸಿದ್ದರು.
ವಿಶ್ವ ರ್ಯಾಂಕಿಂಗ್ನಲ್ಲಿ 22ನೇ ಸ್ಥಾನದಲ್ಲಿರುವ ಕೆರ್ಬರ್ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯದ ಅಶ್ಲೆಘ್ ಬಾರ್ಟಿ ಅವರನ್ನು ಎದುರಿಸಲಿದ್ದಾರೆ. ಬಾರ್ಟಿ ಮತ್ತೊಂದು ಸೆಮಿಫೈನಲ್ನಲ್ಲಿ ತಮ್ಮದೇ ದೇಶದ ಡರಿಯಾ ಗಾವ್ರಿಲೋವಾರನ್ನು 3-6, 6-4, 6-2 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.
Next Story