ದಹಾನು ಕಡಲ ತೀರದಲ್ಲಿ ಬೋಟ್ ಮುಳುಗಡೆ; ನಾಲ್ವರು ಶಾಲಾ ಮಕ್ಕಳ ಮೃತ್ಯು

ಮುಂಬೈ, ಜ.13: ಮಹಾರಾಷ್ಟ್ರದ ದಹಾನುವಿನ ಕಡಲ ತೀರದಲ್ಲಿ ಬೋಟ್ ಮುಳುಗಿದ ಪರಿಣಾಮವಾಗಿ ನಾಲ್ವರು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ.
ಸ್ಥಳೀಯ ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ಬೋಟ್ ಮುಳುಗಿದ ಪರಿಣಾಮವಾಗಿ ನಾಲ್ವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟರು. ನೀರಲ್ಲಿ ಮುಳುಗಿದ ಬೋಟ್ ನಲ್ಲಿ ಒಟ್ಟು 40 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಈ ಪೈಕಿ 32 ಮಂದಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಇತರ ನಾಲ್ವರಿಗಾಗಿ ಶೋಧ ಮುಂದುವರಿದಿದೆ ಎಂದು ತಿಳಿದು ಬಂದಿದೆ.
Next Story