ತನ್ನ ನಿವಾಸಕ್ಕೆ ಆಗಮಿಸಿದ ಪ್ರಧಾನಿಯ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಲು ನಿರಾಕರಿಸಿದರೇ ಸಿಜೆಐ?

ಹೊಸದಿಲ್ಲಿ,ಜ.13 : ಸುಪ್ರೀಂ ಕೋರ್ಟಿನ ನಾಲ್ಕು ಮಂದಿ ಅತ್ಯಂತ ಹಿರಿಯ ನ್ಯಾಯಾಧೀಶರುಗಳು ಶುಕ್ರವಾರ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಬಹಿರಂಗವಾಗಿ ಸಿಡಿದೆದ್ದಿದ್ದರೆ, ಶನಿವಾರ ಪ್ರಧಾನಿ ನರೇಂದ್ರ ಮೋದಿಯ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದ್ದರೂ ಅವರನ್ನು ಗದರಿಸಿ ಭೇಟಿಯಾಗಲು ನ್ಯಾಯಮೂರ್ತಿ ಮಿಶ್ರಾ ನಿರಾಕರಿಸಿದ್ದಾರೆನ್ನಲಾಗಿದೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ನೃಪೇಂದ್ರ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿಯ ಮೆನನ್ ಮಾರ್ಗ್ ನಿವಾಸದಿಂದ ಹಿಂದೆ ಮರಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ನ್ಯಾಯಮೂರ್ತಿ ಮಿಶ್ರಾ ಅವರ ನಿವಾಸದೆದುರು ಶುಕ್ರವಾರ ಅಪರಾಹ್ನದಿಂದ ಪತ್ರಕರ್ತರು ಕಾಯುತ್ತಿದ್ದು ಹಿರಿಯ ನ್ಯಾಯಾಧೀಶರುಗಳ ಬಂಡಾಯದ ಬಗ್ಗೆ ಅವರ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದಾರೆ. ಆದರೆ ಇಲ್ಲಿಯ ತನಕ ಜಸ್ಟಿಸ್ ಮಿಶ್ರಾ ತಮ್ಮ ಮೌನ ಮುರಿದಿಲ್ಲ.
ಶುಕ್ರವಾರ ಸಿಪಿಐ ನಾಯಕ ಡಿ.ರಾಜಾ ಅವರು ನ್ಯಾಯಮೂರ್ತಿ ಚೆಲಮೇಶ್ವರ್ ಅವರ ನಿವಾಸಕ್ಕೆ ಆಗಮಿಸಿ ಅಬರನ್ನು ಭೇಟಿಯಾಗಿರುವುದು ಹಲವರ ಹುಬ್ಬೇರಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಮೋದಿ ತಮ್ಮ ಪ್ರಧಾನ ಕಾರ್ಯದರ್ಶಿಯನ್ನು ಮುಖ್ಯ ನ್ಯಾಯಮೂರ್ತಿಯ ನಿವಾಸಕ್ಕೆ ಏಕೆ ಕಳುಹಿಸಿದರೆಂಬುದು ತಿಳಿದು ಬಂದಿಲ್ಲ.
Principal Secretary to PM, Nripendra Misra, seen outside Chief Justice of India Dipak Misra’s residence in Delhi. pic.twitter.com/5C2PVvO36T
— ANI (@ANI) January 13, 2018