ಹೆಲಿಕಾಪ್ಟರ್ ಪತನ ; ಮೂರು ಮಂದಿ ಸಾವು, ನಾಲ್ವರು ನಾಪತ್ತೆ
ಮುಂಬೈ, ಜ.13: ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಮುಂಬೈನ ಸಮದ್ರದಲ್ಲಿ ಶನಿವಾರ ಪತನಗೊಂಡ ಪರಿಣಾಮವಾಗಿ ಹೆಲಿಕಾಪ್ಟರ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ.
ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲೆಟ್ ಗಳು ಮತ್ತು ಒಎನ್ ಜಿಸಿಯ ಐವರು ನೌಕರರು ಸೇರಿದಂತೆ 7 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಒಎನ್ ಜಿಸಿಯ ನೌಕರರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಬೆಳಗ್ಗೆ 10:20ಕ್ಕೆ ಜುಹು ವಿಮಾನ ನಿಲ್ದಾಣದಿಂದ ಹೊರಟಿತ್ತು. 10:58ಕ್ಕೆ ಇಳಿಯಬೇಕಾಗಿದ್ದ ಹೆಲಿಕಾಪ್ಟರ್ ದಹಾನು ಬಳಿಯ ಸಮುದ್ರದಲ್ಲಿ ಪತನಗೊಂಡಿದೆ. ನಾಪತ್ತೆಯಾಗಿರುವ ಮಂದಿಗೆ ಶೋಧ ಕಾರ್ಯ ಮುಂದುವರಿದಿದೆ.
Next Story