ಇಡಿಯಿಂದ 85 ಕೋ.ರೂ. ವಶ

ಹೊಸದಿಲ್ಲಿ, ಜ. 13: ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆ ಭಾಗವಾಗಿ ಆದಾಯ ತೆರಿಗೆ ಇಲಾಖೆ ದಿಲ್ಲಿಯಲ್ಲಿರುವ ಖಾಸಗಿ ಭದ್ರತಾ ಕೊಠಡಿಯೊಂದರ ಮೇಲೆ ದಾಳಿ ನಡೆಸಿ ಚಿನ್ನ-ಬೆಳ್ಳಿ ಗಟ್ಟಿ, ಆಭರಣ ಹಾಗೂ ನಗದು ಸೇರಿದಂತೆ ಒಟ್ಟು 85.2 ಕೋ. ರೂ. ವಶಪಡಿಸಿಕೊಂಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಹೊಸದಿಲ್ಲಿಯ ಖಾಸಗಿ ಭದ್ರತಾ ಕೊಠಡಿ ಮೇಲೆ ದಾಳಿ ನಡೆಸಿ 23 ಕೋ. ರೂ. ಮೌಲ್ಯದ ಚಿನ್ನದ ಆಭರಣ, ಚಿನ್ನದ ಬಿಸ್ಕೆಟ್, ಅಮೂಲ್ಯ ಹರಳುಗಳು ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story