ಹಿಂದೂ ದೇವತೆಯ ಅವಹೇಳನ: ಗೀತರಚನೆಕಾರ ವೈರಮುತ್ತು ವಿರುದ್ಧ ದೂರು ದಾಖಲು

ಚೆನ್ನೈ, ಜ.13: ಹಿಂದೂ ದೇವತೆಯನ್ನು ಅವಹೇಳನ ಮಾಡಿದ ಆರೋಪದಲ್ಲಿ ತಮಿಳು ಸಿನೆಮಾರಂಗದ ಗೀತರಚನೆಕಾರರಾದ ವೈರಮುತ್ತು ಅವರ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಮುನ್ನಾನಿ ಪಕ್ಷದ ಕಾರ್ಯಕರ್ತರೊಬ್ಬರು ನೀಡಿದ ದೂರಿನಂತೆ ಪೊಲೀಸರು ವೈರಮುತ್ತು ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಪಾಳಯಂನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವೈರಮುತ್ತು ಅವರು ಹಿಂದೂ ದೇವತೆ ಅಂಡಾಲ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. ಅವರ ಈ ಹೇಳಿಕೆಯಿಂದ ಶ್ರೀ ಆಂಡಾಲ್ ಮಾತೆಯ ಭಕ್ತರಿಗೆ ತೀವ್ರ ನೋವುಂಟಾಗಿರುವುದಾಗಿ ದೂರುದಾರರಾದ ಸೂರಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story