ಗುಂಡಿನ ದಾಳಿ: ಯೋಧ ಹುತಾತ್ಮ

ಜಮ್ಮು, ಜ. 13: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆಗುಂಟ ಪಾಕಿಸ್ತಾನ ಸೇನಾ ಪಡೆಯ ಅಪ್ರಚೋದಿತ ಗುಂಡಿನ ದಾಳಿಗೆ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಸುಂದರ್ಬನಿ ವಲಯದ ಗಡಿಗುಂಟ ಭಾರತೀಯ ಠಾಣೆ ಮೇಲೆ ಪಾಕಿಸ್ತಾನ ಸೇನಾ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಗಡಿ ನಿಯಂತ್ರಣ ರೇಖೆಯಲ್ಲಿ ಪಹರೆ ನಡೆಸುತ್ತಿದ್ದ ಸೇನಾ ಪಡೆ ಕೂಡ ಗುಂಡಿನ ದಾಳಿ ನಡೆಸಿತು.
ಗುಂಡಿನ ಚಕಮಕಿಯಲ್ಲಿ ಮಹಾರಾಷ್ಟ್ರ ಧುಲೆ ಜಿಲ್ಲೆಯ ಖಲಾನೆ ಗ್ರಾಮದ ಲ್ಯಾನ್ಸ್ ಯಕ್ಕ್ ಯೋಗೇಶ್ ಮುರಳೀಧರ ಭದನೆ (28) ಗಂಭೀರ ಗಾಯಗೊಂಡರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
Next Story