ಸಹಾ, ಭುವಿ, ಧವನ್‌ರನ್ನು ಕೈ ಬಿಟ್ಟ ಭಾರತ

ಸೆಂಚೂರಿಯನ್, ಜ.13: ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ 72 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ ಸರಣಿ ಸೋಲು ತಪ್ಪಿಸಲು ಗೆಲ್ಲಬೇಕಾದ ಎರಡನೇ ಟೆಸ್ಟ್‌ನಲ್ಲಿ ತಂಡದ ಅಂತಿಮ ಹನ್ನೊಂದರ ಆಯ್ಕೆಯಲ್ಲಿ ಎಡವಟ್ಟು ಮಾಡಿಕೊಂಡಿದೆ. ತಂಡದ ಉಪನಾಯಕ ಅಜಿಂಕ್ಯ ರಹಾನೆ, ಆರಂಭಿಕ ದಾಂಡಿಗ ಶಿಖರ್ ಧವನ್, ವೇಗಿ ಭುವನೇಶ್ವರ ಕುಮಾರ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರನ್ನು ಹೊರಗಿಟ್ಟಿದೆ. ಆರಂಭಿಕ ದಾಂಡಿಗ ಲೋಕೇಶ್ ರಾಹುಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದು, ಇವರಿಗಾಗಿ ಧವನ್ ಸ್ಥಾನ ತೆರವುಗೊಳಿಸಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಉಪನಾಯಕ ಅಜಿಂಕ್ಯ ರಹಾನೆಗೆ ಎರಡನೇ ಟೆಸ್ಟ್‌ನಲ್ಲಿ ಅವಕಾಶ ಸಿಗಲಿಲ್ಲ.
ಕಳೆದ ಪಂದ್ಯದಲ್ಲಿ 10 ಕ್ಯಾಚ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮತ್ತು 6 ವಿಕೆಟ್‌ಗಳನ್ನು ಕಬಳಿಸಿದ್ದ ಭುವನೇಶ್ವರ ಕುಮಾರ್ ಅವರನ್ನು ಕೈ ಬಿಡಲಾಗಿದೆ. ಇವರನ್ನು ತಂಡದಿಂದ ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರ ನಿಲುವಿನ ಬಗ್ಗೆ ಮಾಜಿ ಆಟಗಾರರಿಂದ ಟೀಕೆ ವ್ಯಕ್ತವಾಗಿದೆ.
ಪಾರ್ಥಿವ್ ಪಟೇಲ್ ಮತ್ತು ಇಶಾಂತ್ ಶರ್ಮಾ ಅವರು ಹಾಶೀಮ್ ಅಮ್ಲ ಅವರು ನೀಡಿದ್ದ ಎರಡು ಕ್ಯಾಚ್‌ಗಳನ್ನು ಕೈ ಬಿಟ್ಟಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಕೆಟ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಆದರೆ ಪಾರ್ಥಿವ್ ಪಟೇಲ್ ಅವರು ಆರಂಭಿಕ ದಾಂಡಿಗ ಏಡೆನ್ ಮರ್ಕರಮ್ ಅವರನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಅಶ್ವಿನ್ ಜೊತೆ ಕೈ ಜೋಡಿಸಿದ್ದರು.
ಹಾಶೀಮ್ ಅಮ್ಲ ಅವರು ಎರಡು ಜೀವದಾನ ಪಡೆದಿದ್ದರೂ ಅವರಿಗೆ ಅರ್ಧಶತಕ ದಾಖಲಿಸಲಷ್ಟೇ ಸಾಧ್ಯವಾಯಿತು. 99 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 36ನೇ ಅರ್ಧಶತಕ ದಾಖಲಿಸಿದ ಅಮ್ಲ ಅವರಿಗೆ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಅವರು 82 ರನ್ ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯ ರನೌಟ್ ಮಾಡಿದರು.112ನೇ ಟೆಸ್ಟ್‌ನಲ್ಲಿ 29ನೇ ಶತಕ ದಾಖಲಿಸಲು ಅಮ್ಲಗೆ ಸಾಧ್ಯವಾಗಲಿಲ್ಲ.







