ಭಾರತಕ್ಕೆ ಆಗಮಿಸಿದ ಇಸ್ರೇಲ್ ಪ್ರಧಾನಿ

ಹೊಸದಿಲ್ಲಿ, ಜ.14: ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಆಗಮಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ನೆತನ್ಯಾಹು ಅವರನ್ನು ಬರಮಾಡಿಕೊಂಡಿದ್ದು, 6 ದಿನಗಳ ಪ್ರವಾಸದಲ್ಲಿರುವ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರನ್ನು ಭೇಟಿಯಾಗಲಿದ್ದಾರೆ.
ನೆತನ್ಯಾಹು ಜೊತೆ ಅವರ ಪತ್ನಿ ಸಾರಾ ಹಾಗು ವಿವಿಧ ವಲಯಗಳ 130 ಸದಸ್ಯರ ನಿಯೋಗ ಆಗಮಿಸಿದೆ.
Next Story