Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಮೂಲ ಆಹಾರ ಪದ್ಧತಿಗಳನ್ನು ಕೈಬಿಟ್ಟ...

ಮೂಲ ಆಹಾರ ಪದ್ಧತಿಗಳನ್ನು ಕೈಬಿಟ್ಟ ಪರಿಣಾಮ ಕಾಯಿಲೆಗಳ ಉಲ್ಬಣ: ಆಹಾರ ತಜ್ಞ ಡಾ.ಖಾದರ್

ವಾರ್ತಾಭಾರತಿವಾರ್ತಾಭಾರತಿ14 Jan 2018 6:22 PM IST
share
ಮೂಲ ಆಹಾರ ಪದ್ಧತಿಗಳನ್ನು ಕೈಬಿಟ್ಟ ಪರಿಣಾಮ ಕಾಯಿಲೆಗಳ ಉಲ್ಬಣ: ಆಹಾರ ತಜ್ಞ ಡಾ.ಖಾದರ್

ಬೆಂಗಳೂರು, ಜ.14: ವಿಜ್ಞಾನ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಪ್ರಾಚೀನ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು, ನಮ್ಮ ದೇಶದ ಮೂಲ ಆಹಾರದ ಪದ್ಧತಿಯನ್ನು ಮರೆತಿದ್ದೇವೆ. ಇದರಿಂದಾಗಿ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದ ಆಹಾರ ತಜ್ಞ ಡಾ.ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ಗ್ರಾಮೀಣ ಅಂಗಡಿ ವತಿಯಿಂದ ಜಯನಗರದ ವಿಜಯ ಕಾಲೇಜು ಆವರಣದಲ್ಲಿರುವ ಬಿಎಚ್‌ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಆಧುನಿಕ ರೋಗಗಳ ನಿವಾರಣೆ ಕುರಿತ ಉಪನ್ಯಾಸ ಹಾಗೂ ತಿಳಿದು ತಿನ್ನೋಣ ಬನ್ನಿ’ ಪುಸ್ತಕದ ನಾಲ್ಕನೇ ಮುದ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಾಗುತ್ತಿರುವ ಬದಲಾವಣೆಯಿಂದ ಹತ್ತಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ, ನೈಸರ್ಗಿಕವಾಗಿ ಬಳಕೆ ಬೆಳೆಯುವ ಸಾಮೆ, ಸಜ್ಜೆ, ನವಣೆ, ಆರಕ, ಬರಗು, ಊದಲು, ರಾಗಿ, ಜೋಳದಂತಹ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವೆನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

60 ವರ್ಷಗಳ ಹಿಂದೆ ರೈತರು ತಮ್ಮ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಬೆಳೆ ಬೆಳೆಯುತ್ತಿದ್ದರು. ಅದರಿಂದಾಗಿ ಆರೋಗ್ಯಕರ ಜೀವನ ನಡೆಸುತ್ತಿದ್ದರು. ಆದರೆ, ಇತ್ತೀಚಿಗೆ ಸಾವಯವ ಕೃಷಿ ಮರೆಯಾಗುತ್ತಿದ್ದು, ಎಲ್ಲ ಕಡೆಗಳಲ್ಲಿಯೂ ಹೈಬ್ರೀಡ್ ಮತ್ತು ರಾಸಾಯನಿಕ ಬಳಕೆ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದಿಸುವ ಬದಲಿಗೆ ಆಲ್ಕೋಹಾಲ್ ಉತ್ಪಾದನೆ ಮಾಡಲಾಗುತ್ತಿದೆ. ಹೆಚ್ಚು ಹಾಲು ಪಡೆಯುವ ಸಲುವಾಗಿ ಜಾನುವಾರುಗಳಿಗೆ ಹಾರ್ಮೋನುಗಳ ಸ್ಟಿರಾಯ್ಡಿಗಳನ್ನು ಹಾಕಿಸುತ್ತಿರುವದರ ಪರಿಣಾಮ ನಮ್ಮ ಮಕ್ಕಳು ಅವಧಿಗೂ ಮುನ್ನ ಅಸಹಜವಾಗಿ ಋತುಮತಿಗಳಾಗುತ್ತಿದ್ದಾರೆ ಎಂದು ನುಡಿದರು.

ಇಂದಿನ ವಿಜ್ಞಾನಿಗಳು ಹೇಳುವ ರೀತಿಯಲ್ಲಿ ಹಾಲು ಸಂಪೂರ್ಣ ಆಹಾರವಲ್ಲ. ತಾಯಿ ಹಾಲು ಮಾತ್ರ ಸಂಪೂರ್ಣ ಆಹಾರವಾಗುತ್ತದೆ. ಯಾವುದೇ ಸ್ತನ್ಯಜೀವಿ 2 ರಿಂದ 3 ವರ್ಷ ಮಾತ್ರ ಹಾಲುಣಿಸುತ್ತದೆ. ಆದರೆ, ನಾವು 15-20 ವರ್ಷಗಳಾದರೂ ಮಕ್ಕಳಿಗೆ ಹಾಲು ಕೊಡುತ್ತೇವೆ. ಇದರಿಂದಾಗಿ ಶೇ.100 ರಷ್ಟರಲ್ಲಿ ಶೇ.60 ರಷ್ಟು ಜನರು ಮಧುಮೇಹ, ಕ್ಯಾನ್ಸರ್, ರಕ್ತದೊತ್ತಡ ಸೇರಿದಂತೆ ಅನೇಕ ಖಾಯಿಲೆಗಳು ಅಂಟಿಕೊಳ್ಳುತ್ತಿವೆ ಎಂದು ಅವರು ಹೇಳಿದರು.

ಕಂಪೆನಿಗಳಿಂದು ನೀರನ್ನು ಮಾರಾಟ ಮಾಡುವ ಬದಲಿಗೆ, ನೀರಿನ ಹೆಸರಿನಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುತ್ತಿವೆ. ಈ ಪ್ಲಾಸ್ಟಿಕ್ ನೀರನ್ನು ಸೇವನೆ ಮಾಡುವುದರಿಂದ ಹದಿಹರೆಯದಲ್ಲೇ ಕೂದಲು ಉದುರುತ್ತಿದೆ, ಗ್ಯಾಸ್ಟ್ರಿಕ್ ಸಮಸ್ಯೆ ಮಕ್ಕಳಲ್ಲಿ ಕಾಡುತ್ತಿದೆ ಎಂದರು.

ಮತ್ತೊಂದು ಕಡೆ ಅವಧಿ ಮುಗಿದ ರಾಸಾಯನಿಕಗಳನ್ನು ಸೂಕ್ತ ವೀಲೇವಾರಿ ಮಾಡಲಾಗದೇ ಫರ್ಟಿಲೈಸರ್ಸ್ ಕಂಪೆನಿಗಳಿಗೆ ನೀಡಲಾಗುತ್ತಿದೆ. ಅದರಿಂದ ಗೊಬ್ಬರವನ್ನು ತಯಾರು ಮಾಡಿ ರೈತರಿಗೆ ನೀಡಲಾಗುತ್ತಿದೆ. ಈ ರಾಸಾಯನಿಕಗಳಿಂದ ತಯಾರಿಸಿದ ಗೊಬ್ಬರ ಹಾಕಿ ಬೆಳೆ ಬೆಳೆದು ಜನರನ್ನು ಕೊಲ್ಲಲಿದೆ ಎಂದು ಎಚ್ಚರಿಸಿದರು.

ನಿವೃತ್ತ ನ್ಯಾ.ಎಚ್.ಎಸ್.ನಾಗಮೋಹನ್‌ದಾಸ್ ಮಾತನಾಡಿ, ದೇಶದಲ್ಲಿ ಸಾಂಸ್ಕೃತಿಕ ದಿವಾಳಿತನ ಹೆಚ್ಚಾಗುತ್ತಿದೆ. ಇದರ ಜೊತೆಗೆ, ದಿನದಿಂದ ದಿನಕ್ಕೆ ಕಾರ್ಪೋರೇಟ್ ವ್ಯವಸ್ಥೆ ಬಲಗೊಳ್ಳುತ್ತಿದ್ದು, ಕೈಗಾರೀಕರಣ ಅತಿಯಾಗಿದೆ. ಅಲ್ಲದೆ, ಕೃಷಿ ಮಾಡಬೇಕಾದ ಭೂಮಿ, ನೀರು ಕೈಗಾರೀಕರಣಕ್ಕೆ ಬಳಕೆ ಮಾಡುತ್ತಿದ್ದು, ಗಾಳಿ, ನೀರು ಸೇರಿದಂತೆ ಎಲ್ಲವೂ ಮಾಲಿನ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ವ್ಯಾಪಾರೀಕರಣ ಅತಿಯಾಗುತ್ತಿದೆ. ಅನವಾಶ್ಯಕ ವಸ್ತುಗಳ ಖರೀದಿ ಮಾಡಲು ಜನರಿಗೆ ಉತ್ತೇಜಿಸಲಾಗುತ್ತಿದೆ. ಇದರಿಂದಾಗಿ ಎಲ್ಲಿ ನೋಡಿದರೂ ನಾವು ಬಳಕೆ ಮಾಡುವ ಸಣ್ಣ ಸಣ್ಣ ವಸ್ತುಗಳಿಗೆ ಹಣ ಕೊಟ್ಟು ಖರೀದಿ ಮಾಡಬೇಕಾಗಿದೆ. ಕಡೆ ಪಕ್ಷ ಕುಡಿಯುವ ನೀರು ಖರೀದಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಭಾರತದ ಕೃಷಿ ಕ್ಷೇತ್ರದಲ್ಲಿ ಅವೈಜ್ಞಾನಿಕ ವಿಧಾನ, ತಂತ್ರಜ್ಞಾನ ಹಾಗೂ ವಿಜ್ಞಾನ ಬಳಕೆ ಮಾಡಿದರ ಪರಿಣಾಮವಿಂದು ದೇಶದಲ್ಲಿ ಕೃಷಿ ಬಿಕ್ಕಟ್ಟು ಎದುರಿಸುವಂತಾಗಿದೆ ಎಂದ ಅವರು, ಔಷಧ ತಯಾರಿಸುವ ಕಂಪನಿಗಳು ಅನಗತ್ಯವಾದ ವಿಧಾನಗಳನ್ನು ಆರೋಗ್ಯ ಕ್ಷೇತ್ರದಲ್ಲಿ ತುರುಕಲಾಗುತ್ತಿದೆ. ಹೀಗಾಗಿ, ಇದಕ್ಕೆಲ್ಲಾ ಪರಿಹಾರ ನಮ್ಮ ಮೂಲ ಕೃಷಿ ಪದ್ಧತಿ, ಆರೋಗ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮೀಣ ಅಂಗಡಿಯ ಬಿ.ರಾಜಶೇಖರಮೂರ್ತಿ ಹಾಗೂ ಸಂಧ್ಯಾರಾಣಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X