ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಣ
ಶಿವಮೊಗ್ಗ, ಜ. 14: ಮನೆಯ ಮುಂಬಾಗಿಲಿನ ಚೌಕಟ್ಟಿನ ಮೇಲ್ಭಾಗದಲ್ಲಿಟ್ಟಿದ್ದ ಕೀ ಮೂಲಕ ಬಾಗಿಲ ಬೀಗ ತೆರೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.
ದೂರುದಾರ ಅಭಿಷೇಕ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಭಿಷೇಕ್ ರವರ ತಂಗಿಯು ಆಸ್ಪತ್ರೆಯಿಂದ ಮನೆಗೆ ಆಗಮಿಸಲಿದ್ದ ಕಾರಣದಿಂದ, ಮುಂಬಾಗಿಲಿಗೆ ಬೀಗ ಹಾಕಿ ಕೀಯನ್ನು ಎಂದಿನಂತೆ ಮುಂಬಾಗಿಲಿನ ಚೌಕಟ್ಟಿನ ಮೇಲಿಟ್ಟು ತೆರಳಿದ್ದರು.
ಚೌಕಟ್ಟಿನ ಮೇಲೆ ಕೀ ಇಟ್ಟಿರುವುದನ್ನು ಗಮನಿಸಿರುವ ಕಳ್ಳರು ಕೀ ಮೂಲಕ ಬೀಗ ತೆರೆದು ಒಳ ಪ್ರವೇಶಿಸಿ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





