Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವೀರೇಂದ್ರ ದೇವ ದೀಕ್ಷಿತ್ ಆಶ್ರಮದ...

ವೀರೇಂದ್ರ ದೇವ ದೀಕ್ಷಿತ್ ಆಶ್ರಮದ ಕರ್ಮಕಾಂಡ: ನಾಪತ್ತೆಯಾಗಿದ್ದಾರೆ ಇನ್ನೂ ಹಲವು ಹೆಣ್ಮಕ್ಕಳು

ವಾರ್ತಾಭಾರತಿವಾರ್ತಾಭಾರತಿ14 Jan 2018 7:20 PM IST
share
ವೀರೇಂದ್ರ ದೇವ ದೀಕ್ಷಿತ್ ಆಶ್ರಮದ ಕರ್ಮಕಾಂಡ: ನಾಪತ್ತೆಯಾಗಿದ್ದಾರೆ ಇನ್ನೂ ಹಲವು ಹೆಣ್ಮಕ್ಕಳು

ಹೊಸದಿಲ್ಲಿ, ಜ.14: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯಾಗಿರುವ ಸ್ವಯಂಘೋಷತ ದೇವಮಾನವ ವೀರೇಂದ್ರ ದೇವ ದೀಕ್ಷಿತ್ ಆಶ್ರಮದ ಮೇಲೆ ಇತ್ತೀಚೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ಇದೀಗ ಹಲವು ಹೆಣ್ಮಕ್ಕಳ ಹೆತ್ತವರು, ತಮ್ಮ ಮಕ್ಕಳು ದೀಕ್ಷಿತ್ ಆಶ್ರಮದಲ್ಲಿ ಬಂಧಿಯಾಗಿದ್ದಾರೆ ಅವರನ್ನು ಹೇಗಾದರೂ ಮಾಡಿ ಬಿಡಿಸಿ ಎಂದು ಗೋಗರೆಯುತ್ತಿರುವುದಾಗಿ ನ್ಯಾಯವಾದಿ ಶಲಬ್ ಗುಪ್ತಾ ತಿಳಿಸಿದ್ದಾರೆ. ಶಲಬ್ ಗುಪ್ತಾ ಸರಕಾರೇತರ ಸಂಸ್ಥೆ ಸಾಮಾಜಿಕ ಸಬಲೀಕರಣ ಪ್ರತಿಷ್ಟಾನದ ಪ್ರತಿನಿಧಿಯಾಗಿದ್ದು ಈ ಸಂಸ್ಥೆಯೇ ಮೊದಲ ಬಾರಿ ಸ್ವಯಂಘೋಷಿತ ದೇವಮಾನವನ ವಿರುದ್ಧ ದೂರು ದಾಖಲಿಸಿತ್ತು.

ಇದೀಗ ಅವರ ವಿಳಾಸಕ್ಕೆ ನೂರಾರು ಪತ್ರಗಳು ಬರುತ್ತಿದ್ದು ಪ್ರತಿಯೊಂದರಲ್ಲೂ ತಮ್ಮ ಮಕ್ಕಳನ್ನು ದೇವಮಾನವ ತಮ್ಮ ಆಶ್ರಮದಲ್ಲಿ ಬಂಧಿಯಾಗಿಸಿದ್ದಾರೆ. ದಯಮಾಡಿ ಅವರನ್ನು ಬಂಧಮುಕ್ತಗೊಳಿಸಿ ಎಂಬ ಮನವಿಗಳೇ ಇವೆ ಎಂದು ಗುಪ್ತಾ ತಿಳಿಸಿದ್ದಾರೆ.

ದೇವ ದೀಕ್ಷಿತ್‌ನ ಬಹುತೇಕ ಸಂತ್ರಸ್ತರು ಬ್ರಹ್ಮ ಕುಮಾರಿ ಎಂಬ ಪಂಗಡದ ಅನುಯಾಯಿಗಳಾಗಿದ್ದಾರೆ. ದೇವ ದೀಕ್ಷಿತ್ ಕೂಡಾ ಮೊದಲು ಇದೇ ಪಂಗಡದ ಅನುಯಾಯಿಯಾಗಿದ್ದು ನಂತರ ಅದರಿಂದ ಹೊರಬಂದಿದ್ದ. ಅವನ ಬಳಿ ಮಾತೆಯರು ಮತ್ತು ಸಹೋದರರ ದೊಡ್ಡ ಜಾಲವೇ ಇದ್ದು ಇವರು ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಧ್ಯಮವರ್ಗದ ಮನೆಗಳಲ್ಲಿ ಸತ್ಸಂಗ ಮತ್ತು ಗೀತಾ ಪಾಠಗಳನ್ನು ಮಾಡುತ್ತಿದ್ದರು.

ಈ ಜಾಲದ ಮೂಲಕ ದೀಕ್ಷಿತ್, ಬ್ರಹ್ಮ ಕುಮಾರಿ ಪಂಗಡದ ಸ್ಥಾಪಕರಾದ ಲೇಖರಾಜ್ ಕೃಪಲಾನಿಯವರ ಆತ್ಮವು ತನ್ನ ದೇಹಕ್ಕೆ ವರ್ಗಾವಣೆಯಾಗಿದೆ ಎಂದು ಜನರಿಗೆ ನಂಬಿಕೆ ಬರುವಂತೆ ಮಾಡಿ ಏಳು ದಿನಗಳ ಧ್ಯಾನ ಮತ್ತು ಪ್ರವಚನ ಶಿಬಿರವನ್ನು ಏರ್ಪಡಿಸಿದ್ದ. ನಂತರ ಬ್ರಹ್ಮ ಕುಮಾರಿ ಪಂಗಡದ ಅನುಯಾಯಿಗಳು ದೀಕ್ಷತ್ ಖುದ್ದು ದೇವರ ಅವತಾರ ಎಂದೇ ಭಾವಿಸಲು ಆರಂಭಿಸಿದ್ದರು ಎಂದು ಪೊಲೀಸ್ ಉಪನಿರೀಕ್ಷಕ ಮತ್ತು ಬ್ರಹ್ಮ ಕುಮಾರಿಯ ಮಾಜಿ ಅನುಯಾಯಿಯಾಗಿರುವ ಕೆ. ಗರ್ಗ್ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ.

ಗರ್ಗ್ ಹೇಳುವಂತೆ ಆಶ್ರಮದಲ್ಲಿ ಅನುಯಾಯಿಗಳು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಲೈಂಗಿಕ ಕ್ರಿಯೆ, ಭೂರಿ ಭೋಜನ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ತ್ಯಜಿಸುವಂತೆ ಅವರಿಗೆ ಸೂಚಿಸಲಾಗುತ್ತದೆ. 2020ನೇ ಇಸವಿಯಲ್ಲಿ ಜಗತ್ತು ಅಂತ್ಯವಾಗುತ್ತದೆ ಎಂದು ಹೆದರಿಸುತ್ತಿದ್ದ ದೀಕ್ಷಿತ್, ಅನುಯಾಯಿಗಳು ದಾನದ ಮೂಲಕ ತ್ಯಾಗ ಮಾಡಬೇಕು ಎಂದು ಹೇಳುತ್ತಿದ್ದ.

ಗರ್ಗ್ ಅವರ 16ರ ಹರೆಯದ ಮಗಳನ್ನೂ 2003ರಲ್ಲಿ ಉತ್ತರ ಪ್ರದೇಶದ ಕಂಪಿಲ್‌ನಲ್ಲಿರುವ ಆಶ್ರಮದಲ್ಲಿ ಬಿಡಲಾಗಿತ್ತು. ಆನಂತರ 2004-05ರಲ್ಲಿ ಗರ್ಗ್ ಅವರಿಗೆ ತಮ್ಮ ಮಗಳ ಮುಖವನ್ನು ನೋಡುವ ಅವಕಾಶ ಕೂಡಾ ಸಿಗಲಿಲ್ಲ. ಗರ್ಗ್ ಅವರೊಬ್ಬ ಪೊಲೀಸ್ ಅಧಿಕಾರಿಯಾಗಿದ್ದರೂ ತಮ್ಮ ಮಗಳೇ ನಾಪತ್ತೆಯಾಗಿದ್ದಾಳೆ ಎಂಬ ಸಣ್ಣ ಅನುಮಾನವೂ ಅವರಿಗೆ ಬಂದಿರಲಿಲ್ಲ. ಅವರ ಮಗಳು ಈಗಲೂ ನಾಪತ್ತೆಯಾಗಿದ್ದು ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ.

ಒಂದು ಆಂಗ್ಲ ಪತ್ರಿಕೆಯ ವರದಿಯ ಪ್ರಕಾರ, ದೀಕ್ಷಿತ್ ಜನರಿಗೆ ಆಧ್ಯಾತ್ಮದ ಅಮಲನ್ನು ನೀಡಿ ಅವರಿಂದ ಅವರ ಹೆಣ್ಮಕ್ಕಳನ್ನು ಕಸಿದುಕೊಳ್ಳುತ್ತಾರೆ. ಈ ಹೆಣ್ಮಕ್ಕಳ ಪೈಕಿ ಕೆಲವರಂತೂ 14 ವರ್ಷಕ್ಕೂ ಕಡಿಮೆ ಪ್ರಾಯದವರಾಗಿರುತ್ತಾರೆ. ಈ ಮಕ್ಕಳನ್ನು ಸಣ್ಣಸಣ್ಣ ಗೂಡಿನಂಥ ಕೋಣೆಗಳಲ್ಲಿ ಇಡಲಾಗುತ್ತದೆ. ಸಿಸಿ ಕ್ಯಾಮರಾ ನಿಗಾವಣೆಯಿರುವ ಈ ಕೋಣೆಗಳ ಸ್ಥಿತಿ ಕೂಡಾ ಅಷ್ಟೇನೂ ಚೆನ್ನಾಗಿರುವುದಿಲ್ಲ. ಮುಂಜಾನೆ 2-2.30 ಗಂಟೆಗೆ ಈ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಿ ಅವರಿಗೆ ದೇವಮಾನವನ ಪ್ರವಚನಗಳನ್ನು ಟಿವಿಯಲ್ಲಿ ತೋರಿಸಲಾಗುತ್ತದೆ. ಆನಂತರ ಒಂದು ಚಿತ್ರವನ್ನೇ ಹಲವು ಗಂಟೆಗಳ ಕಾಲ ನೋಡುತ್ತಾ ಧ್ಯಾನ ಮಾಡುವಂತೆ ಹೇಳಲಾಗುತ್ತದೆ. ಕೊನೆಯಲ್ಲಿ ಸ್ನಾನ ಮಾಡಿ ಮುಂಜಾನೆ ನಾಲ್ಕು ಗಂಟೆಯ ಹೊತ್ತಿಗೆ ಅವರು ಕೆಲಸಕ್ಕೆ ಸಿದ್ಧವಾಗಿರಬೇಕಾಗುತ್ತದೆ.

ಈ ಹೆಣ್ಮಕ್ಕಳನ್ನು ನೋಡಲು ಯಾರಿಗೂ ಅವಕಾಶವಿರುವುದಿಲ್ಲ. ಹೆತ್ತವರು ಭೇಟಿಯಾಗಬೇಕಾದರೂ ಇತರರ ನಿಗಾವಣೆಯಲ್ಲೇ ಅವರನ್ನು ಕಳುಹಿಸಲಾಗುತ್ತದೆ.

ರಾಜಸ್ಥಾನ ಮೂಲದ ಕುಟುಂಬವೊಂದು ತಮ್ಮ ಮಗಳನ್ನು ನೊಡಲೇಬೇಕು ಎಂದು ಪಟ್ಟುಹಿಡಿದ ಕಾರಣ ಆಶ್ರಮದ ಕರ್ಮಕಾಂಡಗಳು ಬಯಲಿಗೆ ಬಂದಿದೆ. ಈ ಕುಟುಂಬ ಸಾಮಾಜಿಕ ಸಬಲೀಕರಣ ಪ್ರತಿಷ್ಟಾನವನ್ನು ಸಂಪರ್ಕಿಸಿ ಸಹಾಯಕ್ಕಾಗಿ ಮನವಿ ಮಾಡಿದೆ. ಆನಂತರ ಡಿಸೆಂಬರ್ 19, 2017ರಲ್ಲಿ ದೀಕ್ಷತ್‌ರ ರೋಹಿಣಿ ಆಶ್ರಮಕ್ಕೆ ದಾಳಿ ನಡೆಸಲಾಗಿದೆ. ಈ ದಾಳಿಯ ವೇಳೆ ಆಶ್ರದಲ್ಲಿ 50ಕ್ಕೂ ಅಧಿಕ ಯುವತಿಯರನ್ನು ಬಂಧಿಸಿಡಲಾಗಿತ್ತು ಎಂಬ ಅಂಶ ಬಯಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X