ರಸ್ತೆ ಅಪಘಾತ: ಓರ್ವ ಮೃತ್ಯು
ಬೆಂಗಳೂರು, ಜ.14:ವೇಗವಾಗಿ ಸಾಗುತ್ತಿದ್ದ ಸ್ಕೂಟರ್ ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ದುರ್ಘಟನೆ ಇಲ್ಲಿನ ಹಲಸೂರಿನ ಗಂಗಾಧರಚೆಟ್ಟಿ ಮೊದಲಿಯಾರ್ ರಸ್ತೆಯಲ್ಲಿ ನಡೆದಿದೆ.
ನಗರದ ಹಲಸೂರು ನಿವಾಸಿ ಅಸ್ಸಾಂ ಮೂಲದ ಪೂರ್ಣಬಹದ್ದೂರ್ (53) ಮೃತಪಟ್ಟಿದ್ದು, ಎಂ.ವಿ ಗಾರ್ಡನ್‌ನ ಹರಿಕಿರಣ್ ಹಾಗೂ ವಿಜಯ್ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪೂರ್ಣ ಬಹದ್ದೂರ್, ಶನಿವಾರ ರಾತ್ರಿ 11:10ರ ವೇಳೆ ಮನೆಗೆ ಮೊದಲಿಯಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎಂ.ವಿ.ಗಾರ್ಡನ್ ಕಡೆ ಸ್ಕೂಟರ್‌ನಲ್ಲಿ ವೇಗವಾಗಿ ಹೋಗುತ್ತಿದ್ದ ಕಿರಣ್, ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಢಿಕ್ಕಿಯ ರಭಸಕ್ಕೆ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪೂರ್ಣ ಬಹದ್ದೂರ್ ಮೃತಪಟ್ಟಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಹಲಸೂರು ಸಂಚಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.





