ರನ್ ವೇಯಲ್ಲಿ ಸ್ಕಿಡ್ ಆಗಿ ಸಮುದ್ರದತ್ತ ನುಗ್ಗಿದ 162 ಪ್ರಯಾಣಿಕರಿದ್ದ ವಿಮಾನ: ನಂತರ ನಡೆದದ್ದೇನು?

ಇಸ್ತಾಂಬುಲ್, ಜ.14: ರನ್ ವೇಯಲ್ಲಿ ಸ್ಕಿಡ್ ಆದ ವಿಮಾನವೊಂದು ಕಪ್ಪುಸಮುದ್ರದ ದಂಡೆಯಲ್ಲಿ ನಿಂತ ಘಟನೆ ಟರ್ಕಿಯ ಕರಾವಳಿ ಪ್ರದೇಶದ ವಿಮಾನ ನಿಲ್ದಾಣವೊಂದರಲ್ಲಿ ನಡೆದಿದೆ. ಘಟನೆಯಿಂದ ಪ್ರಯಾಣಿಕರಿಗಾಗಲೀ, ಸಿಬ್ಬಂದಿಗಾಗಲೀ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ ಟ್ರಾಬ್ ಝನ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಮುದ್ರ ದಂಡೆಯ ಮೇಲೆ ನೀರಿಗಿಂತ ಸ್ವಲ್ಪ ಎತ್ತರದಲ್ಲಿ ವಿಮಾನ ನಿಂತಿರುವ ಫೋಟೊಗಳನ್ನು ಬಿಡುಗಡೆ ಮಾಡಲಾಗಿದೆ.


ಬೋಯಿಂಗ್ 737-800 ವಿಮಾನವು ಅಂಕಾರದಿಂದ ಟ್ರಾಬ್ಝಾನ್ ಗೆ ಬಂದಿಳಿದಿತ್ತು. ಆದರೆ ಈ ಸಂದರ್ಭ ಕಾಣಿಸಿಕೊಂಡ ತೊಂದರೆಯಿಂದ ವಿಮಾನವು ಸ್ಕಿಡ್ ಆಗಿದ್ದು, ಸಮುದ್ರದತ್ತ ಹೋಗಿದೆ. ಅದೃಷ್ಟವಶಾತ್ 162 ಪ್ರಯಾಣಿಕರು, ಇಬ್ಬರು ಪೈಲಟ್ ಗಳು ಹಾಗು ನಾಲ್ವರು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪೆಗಸುಸ್ ಏರ್ ಲೈನ್ಸ್ ಹೇಳಿದೆ.
Next Story







