ಬಂದರ್: ನಾಲ್ಕು ಜೋಡಿ ಸಾಮೂಹಿಕ ವಿವಾಹ

ಮಂಗಳೂರು, ಜ.14: ಬಂದರ್‌ನ ಟಿ.ಸಿ. ವೆಲ್ಫೇರ್ ಫೌಂಡೇಶನ್ ವತಿಯಿಂದ ನಾಲ್ಕು ಜೋಡಿಗಳ ಸಾಮೂಹಿಕ ವಿವಾಹವು ಬೀಬಿ ಅಲಾಬಿ ರಸ್ತೆಯ ಬಳಿಯಿರುವ ಫೌಂಡೇಶನ್ ಕಚೇರಿಯ ಮುಂಭಾಗದಲ್ಲಿ ರವಿವಾರ ನೆರವೇರಿತು.
ಝೀನತ್ ಬಕ್ಷ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದ.ಕ.-ಉಡುಪಿ ಜಿಲ್ಲಾ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಉದ್ಘಾಟಿಸಿದರು. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು.
ಝೀನತ್ ಬಕ್ಷ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ ನಿಖಾಹ್ ವಿಧಿ ನೆರವೇರಿಸಿದರು. ಉದ್ಯಮಿಗಳಾದ ಬಿ.ಎಂ.ಫಾರೂಕ್, ಹಾಜಿ ಕಣಚೂರು ಮೋನು, ಎಸ್.ಎಂ.ರಶೀದ್ ಹಾಜಿ, ಮೈಸೂರು ಬಾವ, ಆರಿಫ್ ಮಸೂದ್, ಬಾಷಾ ತಂಙಳ್, ಮಾಜಿ ಮೇಯರ್ ಕೆ.ಅಶ್ರಫ್, ಹನೀಫ್ ಹಾಜಿ, ಹಾಜಿ. ಬಿ.ಎ.ಮೊಯ್ದಿನಬ್ಬ, ಅಬ್ದುಲ್ ಹಮೀದ್, ಇಬ್ರಾಹೀಂ ಹಾಜಿ, ಅಬ್ದುಲ್ ಹಮೀದ್, ಇಬ್ರಾಹೀಂ ಹಾಜಿ, ಲತೀಫ್ ಎಸ್.ಕೆ., ಲತೀಫ್ ಕಂದಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಫೌಂಡೇಶನ್ ಅಧ್ಯಕ್ಷ ಬಿ.ಅಬ್ದುಸ್ಸಲಾಂ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಯಹ್ಯಾ ತಂಙಳ್ ಸ್ವಾಗತಿಸಿದರು.ಅಬ್ದುಲ್ ಖಾದರ್ ನಾವೂರು ವರದಿ ವಾಚಿಸಿದರು. ಟಿ.ಸಿ. ವೆಲ್ಫೇರ್ ಫೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 49 ಜೋಡಿಗಳ ಸಾಮೂಹಿಕ ವಿವಾಹಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಪ್ರತೀ ವಧುವಿಗೂ 5 ಪವನ್ ಚಿನ್ನ ಹಾಗೂ ವರನಿಗೆ ವಾಚ್ ಉಡುಗೊರೆಯಾಗಿ ನೀಡಲಾಗುತ್ತದೆ.







