ಮಾರ್ಟಿನ್ ಗಪ್ಟಿಲ್ ಸಿಕ್ಸರ್ ನಿಂದ 23 ಲಕ್ಷ ರೂ. ಗೆದ್ದ ಪ್ರೇಕ್ಷಕ!
ನ್ಯೂಝಿಲ್ಯಾಂಡ್-ಪಾಕ್ 3ನೆ ಏಕದಿನ ಕ್ರಿಕೆಟ್

ಹೊಸದಿಲ್ಲಿ, ಜ.14: ನ್ಯೂಝಿಲ್ಯಾಂಡ್ ಪಾಕಿಸ್ತಾನ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಕಿವೀಸ್ ಆಟಗಾರ ಮಾರ್ಟಿನ್ ಗಪ್ಟಿಲ್ ಬಾರಿಸಿದ್ದ ಸಿಕ್ಸರೊಂದು ಪಾಕ್ ಕ್ರಿಕೆಟಿಗರನ್ನು ಕಂಗೆಡಿಸಿರಬಹುದು. ಆದರೆ ಪ್ರೇಕ್ಷಕರೊಬ್ಬರು ಬರೋಬ್ಬರಿ 23 ಲಕ್ಷ ರೂ.ಗಳನ್ನು ಗೆದ್ದಿದ್ದಾರೆ.
ತುಯಿ ಎನ್ನುವ ಬಿಯರ್ ಕಂಪೆನಿಯೊಂದು ‘ಕ್ಯಾಚ್ ಎ ಮಿಲಿಯನ್; ಎನ್ನುವ ಸ್ಪರ್ಧೆಯೊಂದನ್ನು ಹಮ್ಮಿಕೊಂಡಿದ್ದು, ಇದರ ಪ್ರಕಾರ ಕೇಸರಿ ಕ್ಯಾಪ್ ಧರಿಸಿದ್ದ ಆಟಗಾರರು ಒಂದು ಕೈನಲ್ಲಿ ಕ್ಯಾಚ್ ಹಿಡಿದರೆ 23 ಲಕ್ಷ ರೂ.ಗಳನ್ನು ಗೆಲ್ಲಬಹುದಾಗಿದೆ.
ಕಿವೀಸ್ – ಪಾಕ್ ನಡುವಿನ 3ನೆ ಪಂದ್ಯದಲ್ಲಿ ಕ್ರೆಗ್ ಡಫರ್ಟಿ ಎಂಬವರು ಈ ಕ್ಯಾಚ್ ಹಿಡಿಯುವ ಮೂಲಕ ಈ ಭಾರೀ ಮೊತ್ತವನ್ನು ತನ್ನದಾಗಿಸಿದ್ದಾರೆ. “ನನಗೆ ಆಲೋಚಿಸಲು ಸಮಯವೇ ಇರಲಿಲ್ಲ. ಬಾಲ್ ಬರುತ್ತಲೇ ನಾನು ಕೈಚಾಚಿದೆ” ಎನ್ನುತ್ತಾರೆ ಕ್ಯಾಚ್ ಹಿಡಿದು 23 ಲಕ್ಷ ರೂ. ಗೆದ್ದ ಕ್ರೆಗ್.
Next Story







