ಮಹಾಭಾರತ ,ರಾಮಾಯಣ ಪ್ರವಚನದ ಮಂಗಲೋತ್ಸವ

ಉಡುಪಿ, ಜ.14: ಪೇಜಾವರ ಪಂಚಮ ಪರ್ಯಾಯದ ಸಂದರ್ಭ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಎರಡು ವರ್ಷಗಳಲ್ಲಿ ನಡೆಸಿಕೊಟ್ಟ ಮಹಾಭಾರತ ಮತ್ತು ರಾಮಾಯಣ ಪ್ರವಚನದ ಮಂಗಲೋತ್ಸವವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ಜರಗಿತು.
ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಮಂತ್ರಾಲಯದ ಮಠಾಧೀಶ ಶ್ರೀವಿಬುಧೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.
Next Story





