ಉಡುಪಿ: ರಾಷ್ಟ್ರೀಯ ಯುವ ದಿನಾಚರಣೆ

ಉಡುಪಿ, ಜ.14: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಉಡುಪಿ ನೆಹರು ಯುವ ಕೇಂದ್ರ ಉಡುಪಿ, ನೇಜಾರು ಶ್ರೀಗುರು ಯುವಕ ಮಂಡಲ ಹಾಗೂ ಜೆಸಿಐ ಕಲ್ಯಾಣಪುರ ಕಾಸ್ಮೋಸಿಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣಾ ಸಪ್ತಾಹ ‘ಪ್ರೇರಣಾ’ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಜೆಸಿ ವಲಯ 15ರ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿದರು. ಜೆಸಿಐ ಕಲ್ಯಾಣಪುರ ಕಾಸ್ಮೋಸಿಟಿ ನಿಯೋಜಿತ ಅಧ್ಯಕ್ಷ ಶ್ರೀನಿವಾಸ್ ಜಿ., ಕಾರ್ಯಕ್ರಮದ ಸಂಯೋಜಕಿ ಶೀತಲ್ ಸಂತೋಷ್, ನಿಯೋಜಿತ ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ, ಗುರು ಯುವಕ ಮಂಡಲ ಅಧ್ಯಕ್ಷ ಗಣೇಶ್ ನಾಯ್ಕ, ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾಕೋ್ಯಾನ್ ಮುಖ್ಯ ಅತಿಥಿಗಳಾಗಿದ್ದರು.
ನೆಹರು ಯುವ ಕೇಂದ್ರದ ಅಧಿಕಾರಿ ವಿಲ್ಫ್ರೇಡ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಲಾಗ್ರಿಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಯೋಜ ನಾಧಿಕಾರಿಗಳಾದ ರವಿನಂದನ್, ಅನುಪಮಾ ಜೋಗಿ ಉಪಸ್ಥಿತರಿದ್ದರು.





