ಟೆಸ್ಟ್ ನಲ್ಲಿ 21ನೇ ಶತಕ ದಾಖಲಿಸಿದ ಕೊಹ್ಲಿ
ಸೆಂಚೂರಿಯನ್ , ಜ.15: ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ಆಕರ್ಷಕ ಶತಕ ದಾಖಲಿಸಿದರು.
ಟೆಸ್ಟ್ ನ 3ನೇ ದಿನವಾಗಿರುವ ಸೋಮವಾರ ಕೊಹ್ಲಿ ಅವರು 146 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ 21ನೇ ಟೆಸ್ಟ್ ಶತಕ ಪೂರ್ಣಗೊಳಿಸಿದರು. ಎರಡನೇ ದಿನದಾಟ ಕೊನೆಗೊಂಡಾಗ ಕೊಹ್ಲಿ ಔಟಾಗದೆ 85 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.
Next Story