ಸಅದಿಯ್ಯ ಸಮಾಜದ ದಿಕ್ಸೂಚಿ : ಯು.ಟಿ.ಖಾದರ್

ಕಾಸರಗೋಡು, ಜ.15: ಉಳ್ಳಾಲ್ ತಂಙಳ್ ಮತ್ತು ಎಂ.ಎ. ಉಸ್ತಾದರು ಸಮಾಜದ ದಿಕ್ಸೂಚಿಯಾಗಿ ಮಾದರಿ ವ್ಯಕಿತ್ವದೊಂದಿಗೆ ಅಮೂಲ್ಯವಾದ ಸಂದೇಶವನ್ನು ಸಅದಿಯ್ಯಾದ ಮೂಲಕ ಲೋಕದ ಮುಂದೆ ಸಮರ್ಪಿಸಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಸಅದಿಯ್ಯದಲ್ಲಿ ನಡೆದ ಉಳ್ಳಾಲ ತಂಙಳ್ ಮತ್ತು ಎಂ.ಎ. ಉಸ್ತಾದ್‌ರ ಆಂಡ್ ನೇರ್ಚೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಡಿದರು.
ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎ. ಕುಂಞಿರಾಮನ್ ಶುಭ ಹಾರೈಸಿದರು. ಸೈಯದ್ ಇಬ್ರಾಹೀಂ ಪೂಕುಂಞಿ ತಂಙಳ್ ಧ್ವಜಾರೋಹಣಗೈದರು. ಅಲಿಕುಂಞಿ ಉಸ್ತಾದ್ ದುಆಗೈದರು.
ಕುಂಬೋಳ್ ಆಟಕೋಯ ತಂಙಳ್ ಅಧ್ಯಕ್ಷತೆಯಲ್ಲಿ ಜ.16ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಸೈಯದ್ ಫಝಲ್ ಕೋಯಮ್ಮ ತಂಙಳ್ ದುಆಗೈಯಲಿದ್ದಾರೆ. ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಬದ್ರುಸ್ಸಾದಾತ್ ಖಲೀಲ್ ತಂಙಳ್, ಅಬ್ದುರ್ರಶೀದ್ ಝೈನಿ, ಶಾಫಿ ಸಅದಿ ಭಾಗವಹಿಸಲಿದ್ದಾರೆ.
Next Story





