ಮಂಗಳೂರಿನಿಂದ ಉಡುಪಿಗೆ ಪರ್ಯಾಯ ಹೊರೆ ದಿಬ್ಬಣ
ಮಂಗಳೂರು, ಜ. 15: ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರ ಪರ್ಯಾಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಹೊರೆಕಾಣಿಕೆ ಹೊರೆದಿಬ್ಬಣವು ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಧ್ಯ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಟಿತು.
ಶರವು ರಾಘವೇಂದ್ರ ಶಾಸ್ತ್ರಿ, ಎಂ.ಬಿ. ಪುರಾಣಿಕ್, ಎ.ಜೆ. ಶೆಟ್ಟಿ, ಕದ್ರಿ ದೇವಸ್ಥಾನದ ಮೊಕ್ತೇಸರರಾದ ಸುರೇಶ್ ಕುಮಾರ್ ಕದ್ರಿ, ಡಾ. ರವಿಚಂದ್ರನ್, ಗಣೇಶ್ ರಾವ್, ಎಂ.ಎಸ್. ಗುರುರಾಜ್, ಕೆ. ಎಸ್. ಕಲ್ಲೂರಾಯ, ಅಶ್ವಥಾಮ ರಾವ್ ಸುಧಾಕರ ರಾವ್ ಪೇಜಾವರ, ರತ್ನಾಕರ ಜೈನ್, ದಯಾನಂದ ಕಟೀಲು, ಶರವು ಗಣೇಶ್ ಭಟ್, ಲೀಲಾಧರ್, ಮೋಹನ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಕದ್ರಿ, ಶರವು ದೇವಸ್ಥಾನ, ಸಮತಾ ಬಳಗ, ಶಾರದಾ ವಿದ್ಯಾಲಯ, ದಿಯಾ ಕಂಪ್ಯೂಟರ್ಸ್, ನಮ್ಮವರು ಎಸ್.ಕೆ.ಡಿ.ಪಿ. ಅಸೋಸಿಯೆಶನ್ ಮೊದಲಾದ ಸಂಘಸಂಸ್ಥೆಗಳು ಪಾಲ್ಗೊಂಡಿದ್ದವು.
40ಕ್ಕೂ ಅಧಿಕ ವಾಹನಗಳಲ್ಲಿ ಅಕ್ಕಿ, ಸಕ್ಕರೆ, ತೆಂಗಿನ ಕಾಯಿ, ಅವಲಕ್ಕಿ, ಸಿಯಾಳ, ಕಟ್ಟಿಗೆ ಒಡೆಯುವ ಯಂತ್ರ, ಗ್ರೈಂಡರ್‌ಗಳು, ಪಂಚಕಜ್ಜಾಯ ಮಾಡುವ ಅಧುನಿಕ ರೋಸ್ಟರ್ ಯಂತ್ರ, ಪಾತ್ರೆಗಳು, ಲೋಟಗಳು ತರಕಾರಿ ಇತ್ಯಾದಿ ಸಾಮಗ್ರಿಗಳನ್ನೊಳಗೊಂಡ ಮೆರವಣಿಗೆಯು ಮಂಗಳೂರಿನಿಂದ ಮುಲ್ಕಿಗೆ ತೆರಳಿ, ಕಟೀಲಿನಿಂದ ಬರುವ ಮೆರವಣಿಗೆಯೊಂದಿಗೆ ಜೊತೆಗೂಡಿ ಉಡುಪಿಗೆ ಸಾಗಿತು.







