ಧರ್ಮ, ಜಾತಿಗಳ ಮಧ್ಯೆ ರಾಜಕೀಯ ಪಕ್ಷಗಳ ಪ್ರವೇಶದಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ: ರಂಭಾಪುರಿ ಸ್ವಾಮೀಜಿ

ಮೈಸೂರು,ಜ.15: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವವರ ವಿರುದ್ಧ ರಂಭಪುರಿ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಸುತ್ತೂರಿನಲ್ಲಿ ಆರಂಭಗೊಂಡಿರುವ ಸುತ್ತೂರು ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧರ್ಮ ಮತ್ತ ಜಾತಿಗಳ ಮದ್ಯೆ ರಾಜಕೀಯ ಪಕ್ಷಗಳ ಪ್ರವೇಶದಿಂದ ಸಾಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮದ ಸ್ಥಾಪನೆಗೆ ಹೋರಾಟ ಮಾಡುತ್ತಿರುವವರ ವಿರುದ್ದ ಅವರು ಕಿಡಿಕಾರಿದ್ದಾರೆ.
ಹಿಂದು ಧರ್ಮದ ಭಾಗವೇ ಆಗಿದ್ದ ಲಿಂಗಾಯತ ಸಮಾಜವನ್ನು ಈಗ ರಾಜಕೀಯ ಪ್ರತಿಷ್ಠೆ ಗಾಗಿ ವಿಭಾಗಿಸಲು ಕೆಲವರು ಮುಂದಾಗಿದ್ದಾರೆ. ಪ್ರತ್ಯೇಕ ಧರ್ಮ ಸ್ಥಾಪನೆಯ ಹೆಸರಿನಲ್ಲಿ ಲಿಂಗಾಯುತರನ್ನು ಈ ಮುಖಂಡರು ಹೋರಾಟಗಾರರು ದಾರಿ ತಪ್ಪಿಸುತ್ತಿದ್ದಾರೆ. ಆ ಮೂಲಕ ಸರ್ವಧರ್ಮ ಸಮನ್ವಯ ಎಂಬ ಭಾರತೀಯರ ಭಾವನೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಶ್ರೀಗಳು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದರು.
ಈ ವೇಳೆ ಸಮಾರಂಭದ ವೇದಿಕೆಯಲ್ಲಿ ಸುತ್ತೂರು ಶ್ರೀಗಳು, ರಾಜ್ಯಪಾಲ ವಜೂಬಾಯಿ ರೂಡಾಬಾಯಿ ವಾಲ ಇದ್ದರು.





