ಮಂಗಳೂರು, ಕಟೀಲು, ಕಾಪುಗಳಿಂದ ಹೊರೆ ಕಾಣಿಕೆ

ಉಡುಪಿ, ಜ.15: ಶ್ರೀ ಪಲಿಮಾರು ಮಠದ ಪರ್ಯಾಯ ಮಹೋತ್ಸವಕ್ಕೆ ಇಂದು ಮಂಗಳೂರು, ಕಟೀಲು, ಮೂಡಬಿದ್ರೆ, ಕಾಪು, ಕಡಂದಲೆಯ ಜನತೆ ಹಾಗೂ ಮಲ್ಪೆಮೀನುಗಾರರ ಸಂಘದ ಸದಸ್ಯರು ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ಹೊರೆ ಕಾಣಿಕೆಯನ್ನು ತಂದು ಸಮರ್ಪಿಸಿದರು.
ಬಳಿಕ ಎಲ್ಲರೂ ಪರ್ಯಾಯ ಶ್ರೀಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಾಗೂ ಭಾವೀ ಪರ್ಯಾಯ ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದ ರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು.
ಈಸಂದರ್ಭದಲ್ಲಿ ಮೂಡಬಿದ್ರೆಯ ಶಾಸಕ ಅಭಯಚಂದ್ರ ಜೈನ್, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಕಟೀಲಿನ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಅಸ್ರಣ್ಣ , ಹರಿನಾರಾಯಣ ಅಸ್ರಣ್ಣ , ಕಮಲಾದೇವಿ ಅಸ್ರಣ್ಣ, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲದೇ ಕಟೀಲಿನ ವಾಸುದೇವ ಅಸ್ರಣ್ಣ, ಗುರ್ಮೆ ಸುರೇಶ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಹಿರಿಯಣ್ಣ ಕಿದಿಯೂರು, ಭುವನಾಭಿರಾಮ ಉಡುಪ, ಶರವು ರಾಘವೇಂದ್ರ ಶಾಸ್ತ್ರೀ, ಕಡಂದಲೆ ಅಪ್ಪಣ್ಣ ಭಟ್ ಮುಂತಾದವರು ಸಹ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡರು.





