ಮುಸ್ಲಿಂ ಲೀಗ್ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು, ಜ.15: ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ ರಾಜ್ಯಾಧ್ಯಕ್ಷ ಎನ್.ಜಾವೀದುಲ್ಲಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಗರದ ಫಿರೋಝ್ ಎಸ್ಟೇಟ್‌ನಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷರನ್ನಾಗಿ ಡಾ.ಮುಹಮ್ಮದ್ ಫಾರೂಕ್ ಆಶಿಯಾನ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಮೀರ್ ಮುನೀರ್ ಅಹ್ಮದ್, ಸಂಘಟನಾ ಕಾರ್ಯದರ್ಶಿಯಾಗಿ ಸೈಯ್ಯದ್ ಯಾಸೀನ್ ಪೀರ್‌ಝಾದೆ ಹಾಗೂ ಕೋಶಾಧಿಕಾರಿಯಾಗಿ ತನ್ವೀರ್ ಮುಹಮ್ಮದ್‌ರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾರ್ಯಾಧ್ಯಕ್ಷರನ್ನಾಗಿ ಎಸ್.ಮಸ್ತಾನ್, ಕಾರ್ಯದರ್ಶಿಯಾಗಿ ನಸೀರ್ ಅಹಮದ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾರ್ಯಾಧ್ಯಕ್ಷರನ್ನಾಗಿ ಶಹಾಬುದ್ದೀನ್, ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾರ್ಯಾಧ್ಯಕ್ಷರನ್ನಾಗಿ ಖದೀರ್ ಅಹ್ಮದ್‌ಖಾನ್, ಕಾರ್ಯದರ್ಶಿಯಾಗಿ ಸಮೀವುಲ್ಲಾ ಖಾದ್ರಿಯನ್ನು ಆಯ್ಕೆ ಮಾಡಿರುವುದಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಇಬ್ರಾಹೀಮ್ ಅಹ್ಮದ್ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
‘





