ಬಿಲ್ಡರ್‌ನಿಂದ ಹಣ ಸುಲಿಗೆ: ಆರ್‌ಟಿಐ ಕಾರ್ಯಕರ್ತೆ ಬಂಧನ

ಥಾಣೆ,ಜ.15: ರಿಯಲ್‌ಎಸ್ಟೇಟ್ ಉದ್ಯಮಿಯೊಬ್ಬರಿಂದ ಹಣವನ್ನು ಸುಲಿಗೆ ಮಾಡಿದ ಆರೋಪದಲ್ಲಿ ಮಾಹಿತಿಹಕ್ಕು ಕಾರ್ಯಕರ್ತೆಯೊಬ್ಬಳನ್ನು ಥಾಣೆಯ ಭ್ರಷ್ಟಾಚಾರ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸಮಾಡುತ್ತಿದ್ದ ಚಾರುಶಿಲಾ ಪಾಟೀಲ್ (37) ಬಂಧಿತ ಆರೋಪಿ. ಕಲ್ಯಾಣ್ ಮೂಲದ ಬಿಲ್ಡರ್ ಒಬ್ಬರಿಂದ ಲಂಚವನ್ನು ಲಂಚ ಸ್ವೀಕರಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಗಿದೆಯೆಂದು ಪೊಲೀಸ್ ವಕ್ತಾರ ಸುಖದಾ ನಾರ್ಕರ್ ತಿಳಿಸಿದ್ದಾರೆ.
ಆರೋಪಿ ಪಾಟೀಲ್, ರಿಯಲ್ ಎಸ್ಟೇಟ್ ಉದ್ಯಮಿ ವಿರುದ್ಧ ಕಲ್ಯಾಣ್-ಡೊಂಬಿವಿಲಿ ನಗರಪಾಲಿಕೆಯಲ್ಲಿ ದೂರು ನೀಡಿದ್ದಳು. ತನಗೆ 50 ಲಕ್ಷ ರೂ. ಪಾವತಿಸದೆ ಇದ್ದಲ್ಲಿ ನಗರಪಾಲಿಕೆಯಿಂದ ಆತನ ಕಟ್ಟಡ ನಿರ್ಮಾಣಗಳನ್ನು ನೆಲಸಮಗೊಳಿಸುವುದಾಗಿ ಬೆದರಿಕೆ ಹಾಕಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 3ರಂದು ಚಾರುಶೀಲಾ ಪಾಟೀಲ್‌ಗೆ ಬಿಲ್ಡರ್ 2 ಲಕ್ಷ ರೂ. ಪಾವತಿಸಿದ್ದರು. ಆನಂತರ ಆಕೆ ಥಾಣೆ ಪೊಲೀಸರಿಗೆ ದೂರು ನೀಡಿದ್ದರು. ರವಿವಾರ ಬಲೆಬೀಸಿದ ಪೊಲೀಸರು, ಬಿಲ್ಡರ್‌ನಿಂದ 5 ಲಕ್ಷ ರೂ. ಸ್ವೀಕರಿಸುತ್ತಿರುವಾಗಲೇ ಆಕೆಯನ್ನು ಬಂಧಿಸಿದ್ದರು.
ಚಾರುಶೀಲಾ ಪಾಟೀಲ್ ವಿರುದ್ಧ ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆಯ 384 ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ.