Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರೈತರು ಕಾರ್ಮಿಕರಾಗಿ ನಗರ ಪ್ರದೇಶಗಳಿಗೆ...

ರೈತರು ಕಾರ್ಮಿಕರಾಗಿ ನಗರ ಪ್ರದೇಶಗಳಿಗೆ ಮುಖ ಮಾಡುತ್ತಿರುವುದು ದುರಂತ: ಸೇನಾನಿ ವಿಷಾದ

ವಾರ್ತಾಭಾರತಿವಾರ್ತಾಭಾರತಿ15 Jan 2018 10:23 PM IST
share
ರೈತರು ಕಾರ್ಮಿಕರಾಗಿ ನಗರ ಪ್ರದೇಶಗಳಿಗೆ ಮುಖ ಮಾಡುತ್ತಿರುವುದು ದುರಂತ: ಸೇನಾನಿ ವಿಷಾದ

ಮೂಡಿಗೆರೆ, ಜ.15: ಕೃಷಿ ಕ್ಷೇತ್ರಕ್ಕೆ 10 ಸಾವಿರ ವರ್ಷ ಇತಿಹಾಸ ಇದ್ದರೂ ಸಹ ಇಂದಿನ ಆಧುನಿಕ ಯುಗದವರೆಗೂ ರೈತರ ಸಂಕಷ್ಟ ಕೊನೆಗೊಳ್ಳದೇ ಕೃಷಿಯನ್ನೇ ಬಿಟ್ಟು, ಕಾರ್ಮಿಕರಾಗಿ ಮಹಾನಗರಗಳಿಗೆ ತೆರಳುತ್ತಿರುವುದು ರೈತ ಸಮುದಾಯದ ದುರಂತ ಎಂದು ಖ್ಯಾತ ಪರಿಸರ ಪ್ರೇಮಿ ಚಿಂತಕ ಸೇನಾನಿ ವಿಷಾಧ ವ್ಯಕ್ತಪಡಿಸಿದರು.

ಅವರು ಸೋಮವಾರ ಹಳಸೆಯ ದಿ ಕಾಫಿ ಕೋರ್ಟ್‍ನಲ್ಲಿ ದೇವವೃಂದ ಸಂಪಾದಕತ್ವದ ಆರಂಭ ರೈತರ ದ್ವಿಮಾಸಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಹಿಂದಿನ ಮಹಾರಾಜರ ಹಾಗೂ ಬ್ರಿಟೀಷರ ಕಾಲದಲ್ಲಿ ರೈತರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಕೃಷಿಕರು ಶತಮಾನಗಳ ಹಿಂದೆಯೇ ನಿರಂತರವಾಗಿ ಶೋಷಣೆಗೊಳಗಾಗುತ್ತಿದ್ದರು ಎಂದು ನುಡಿದರು.

ರೈತರಿಂದ ಹೆಚ್ಚು ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ದೇಶದ ಎಲ್ಲಾ ಬಹುತೇಕ ರಾಷ್ಟ್ರೀಯ ಸ್ಮಾರಕವನ್ನು ರೈತರ ಹಣದಲ್ಲೇ ಕಟ್ಟಿದ್ದರು. ಎಲ್ಲಿಯೂ ರೈತರ ಹೆಸರನ್ನು ಬಳಸಲಿಲ್ಲ. ಪ್ರಜಾಪ್ರಭುತ್ವದ ನಂತರ ದೇಶದಲ್ಲಿ 13 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯಂತಹ ಪ್ರಕರಣಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಅತೀ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಧರ್ಮಪತ್ನಿ ರಾಜೇಶ್ವರಿ ತೇಜಸ್ವಿ ಮಾತನಾಡಿ, ಕೃಷಿ ಕ್ಷೇತ್ರದ ಪತ್ರಿಕೆಗಳು ಬೆಳೆಗಾರರಿಗೆ ಸಂಪೂರ್ಣ ಮಾಹಿತಿಯನ್ನು ನೀಡುವಂತಿದ್ದರೆ, ಅದರಂತೆ ರೈತರು ತಮ್ಮ ಜಮೀನುಗಳಲ್ಲಿ ಫಲವತ್ತಾಗಿ ಬೆಳೆ ಬೆಳೆದರೆ ಸರಕಾರದಿಂದ ಸಹಾಯಧನ ರೈತರಿಗೆ ಅವಶ್ಯಕತೆ ಇಲ್ಲದಂತಾಗುತ್ತದೆ. ಸಹಾಯಧನಕ್ಕಾಗಿ ಕಚೇರಿಯಿಂದ ಕಚೇರಿಗೆ ರೈತರು ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು. 

ಮಾಧ್ಯಮಗಳು ಸಮಾಜದ ಕೈಗನ್ನಡಿ ಇದ್ದಂತೆ. ಓದುಗರಿಗೆ ಆಕರ್ಷಣೆ ನೀಡುವ ಜೊತೆಗೆ ಪತ್ರಿಕೆಗಳ ಲೇಖನದಿಂದ ಪರಿಸರವನ್ನು ಉಳಿಸುವಂತಾಗಬೇಕು. ಪ್ರಕೃತಿ ಉಳಿದರೆ ಜನರಿಗೆ ಆರೋಗ್ಯ ಹಾಗೂ ಬೆಳೆಯುವ ಬೆಳೆಗಳು ಸಮೃದ್ಧಿಯಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವುದರೊಂದಿಗೆ ಜನರಿಗೂ ಉತ್ತಮ ಆಹಾರ ಪದಾರ್ಥ ದೊರೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರಂಭ ರೈತ ಸಂಚಿಕೆಯ ಸಂಪಾದಕ ದೇವವೃಂದ ಜಯರಾಂ ಮಾತನಾಡಿ, ಬೆಳೆಗಳ ನಿರ್ವಹಣೆಗೆ ಸಹಕಾರಿಯಾಗಲೆಂದು ಆರಂಭ ಎಂಬ ದ್ವಿಮಾಸಿಕ ಸಂಚಿಕೆಯನ್ನು ಹೊರ ತರಲಾಗಿದೆ. ಇದರಲ್ಲಿ ಮೌಲ್ಯಾಧಾರಿತ ಬೆಳೆ ವಿಧಾನ, ಕೃಷಿ ಸಾಮಾಜಿಕ ವಿಚಾರ ಮಂಥನ ಸಂಗ್ರಹಿಸಿ ಸರ್ವಕಾಲಿಕ ವಿಚಾರಗಳ ಲೇಖನವಾಗಿ ರೈತರ ಕೈಗೆ ನೀಡಿದಾಗ ರೈತರಿಗೆ ಜೀವ ಜಗತ್ತಿನ ಗಡಿಯಾರವಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಬೆಳೆಗಾರ ಪತ್ರಿಕೆ ಸಂಪಾದಕ ಸುರೇಂದ್ರ, ಕೃಷಿಕ ಪತ್ರಿಕೆ ಸಂಪಾದಕ ಆ.ರಾ.ಸುಚೇತನಾ, ಧರ್ಪಣ ಪತ್ರಿಕೆ ಸಂಪಾದಕ  ಪ್ರಸನ್ನ ಗೌಡಹಳ್ಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಕೃಪಾಕರ, ಮುಖಂಡರಾದ ಮಧುಚಂದನ್, ಧರ್ಮರಾಜ್, ಡಾ.ಅಂಕೇಗೌಡ, ನಂದಿತಾ ಧರ್ಮರಾಜ್, ಸಿ.ಸುರೇಶ್, ಲಾವಣ್ಯ ಮೋಹನ್, ಸುರೇಶ್ ಚಂದ್ರದತ್ತ, ವಿವೇಕ್ ಪುಣ್ಯಮೂರ್ತಿ, ರಾಘವೇಂದ್ರ, ದಿವ್ಯಪ್ರಸಾದ್ ಮತ್ತಿತರರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X