ಗೋವಾ: ಎ.ಕೆ. ಗ್ರೂಪ್ ನ ನೂತನ ಪ್ಲೈವುಡ್ ಉತ್ಪಾದನಾ ಘಟಕ ಶುಭಾರಂಭ
ಗೋವಾದ ಪ್ರಪ್ರಥಮ ಪ್ಲೈವುಡ್ ಉತ್ಪಾದನಾ ಘಟಕ

ಮಂಗಳೂರು,ಜ.15: ಪ್ರತಿಷ್ಠಿತ ಪ್ಲೈವಡ್ ತಯಾರಿಕಾ ಸಂಸ್ಥೆ ಎ.ಕೆ. ಗ್ರೂಪ್ ಇದರ ನೂತನ ಕಾರ್ಖಾನೆ ‘ದಿ ಆ್ಯಕ್ಸಿಸ್’ ಗೋವಾದಲ್ಲಿ ಸೋಮವಾರ ಶುಭಾರಂಭಗೊಂಡಿದೆ.ಗೋವಾದ ಕನ್ ಕೊಲಿಮ್ ಕೈಗಾರಿಕಾ ಪ್ರದೇಶದಲ್ಲಿರುವ ಈ ನೂತನ ಕಾರ್ಖಾನೆಯನ್ನು ಮಂಗಳೂರಿನ ಮಸ್ಜಿದುಲ್ ಹುದಾದ ಖತೀಬರಾದ ಮುಹಮ್ಮದ್ ಕುಂಞಿರವರು ಉದ್ಘಾಟಿಸಿದರು. ‘ದಿ ಆ್ಯಕ್ಸಿಸ್’ ಗೋವಾ ರಾಜ್ಯದಲ್ಲೇ ಕಾರ್ಯಾರಂಭ ಮಾಡಿರುವ ಪ್ರಪ್ರಥಮ ಪ್ಲೈವುಡ್ ಕಾರ್ಖಾನೆಯಾಗಿದೆ.
ಇದೇ ಸಂದರ್ಭದಲ್ಲಿ ‘ಪ್ಲಾಟಿನಂ ಪ್ಲಸ್’ ಎಂಬ ವಿನೂತನ ಪ್ಲೈವುಡ್ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ. ಉತ್ಕೃಷ್ಟ ಗುಣಮಟ್ಟದ ಪ್ಲೈವುಡ್ ಗೆ 5 ಬಾರಿ ಮನಿಬ್ಯಾಕ್ ಗ್ಯಾರೆಂಟಿ ಇದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಪ್ಲೈವುಡ್ ತಯಾರಿಕೆಯಲ್ಲಿ ವ್ಯಾಪಕ ಮನ್ನಣೆ ಹಾಗು ಖ್ಯಾತಿ ಪಡೆದಿರುವ ಎ.ಕೆ.ಗ್ರೂಪ್ ಕರ್ನಾಟಕ,ಕೇರಳ ರಾಜ್ಯಗಳಲ್ಲದೆ, ವಿಯೆಟ್ನಾಂ, ಮಯನ್ಮಾರ್ ಹಾಗು ಲಾವೋಸ್ ದೇಶಗಳಲ್ಲೂ ಪ್ಲೈವುಡ್ ಉತ್ಪಾದನಾ ಘಟಕಗಳನ್ನು ಹೊಂದಿದೆ.
ಎ.ಕೆ. ಗ್ರೂಪ್ ನ ಅಧ್ಯಕ್ಷ ಎಂ.ಅಹ್ಮದ್ ಹಾಗು ಸಂಸ್ಥೆಯ ಎಲ್ಲಾ ನಿರ್ದೇಶಕರು, ಕುಟುಂಬ ಸದಸ್ಯರು ಉಪಸ್ಥಿತರಿದ್ದರು.





