ತಿರುವನಂತಪುರಂ: ಡಿವೈಎಫ್ಐ, ಬಿಜೆಪಿ ಕಾರ್ಯಕರ್ತರಿಗೆ ಇರಿತ

ತಿರುವನಂತಪುರಂ,ಜ. 16: ಇಲ್ಲಿಗೆ ಸಮೀಪದ ಕಾರಕೊಣಂ ಎಂಬಲ್ಲಿ ಡಿವೈಎಫ್ಐ ಕಾರ್ಯಕರ್ತ ಮತ್ತು ಬಿಜೆಪಿ ಕಾಯರ್ತರೊಬ್ಬರಿಗೆ ಇರಿಯಲಾಗಿದೆ. ನಿನ್ನೆ ರಾತ್ರಿ 10ಗಂಟೆಗೆ ಡಿವೈಎಫ್ಐ ಕಾಯಕರ್ತ ಕಾರಕೊಣಂ ಅಶ್ವಿನ್ರಿಗೆ ಆರೆಸ್ಸೆಸ್ ಕಾರ್ಯಕರ್ತರು ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ. ಡಿವೈಎಫ್ಐ ಕಾರಕೋಣಂ ಸ್ಥಾನೀಯ ಸಮಿತಿಯ ಕಾರ್ಯದರ್ಶಿಯಾಗಿರುವ ಅಶ್ವಿನ್ ಕೆಲಸದ ಸ್ಥಳದಿಂದ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಘಟನೆಯ ಬಳಿಕ ರಾತ್ರಿ 12ಗಂಟೆಗೆ ತೊಲಡಿ ನಿವಾಸಿ ಸತಿಕುಮಾರ್ ಮೇಲೆ ತಂಡವೊಂದು ದಾಳಿ ನಡೆಸಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ಬಿಜೆಪಿ ಕಾರ್ಯಕರ್ತನಾಗಿರುವ ಸತಿಕುಮಾರ್ರನ್ನು ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
Next Story