ಬಂಟ್ವಾಳ : ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು
ಬಂಟ್ವಾಳ, ಜ. 16: ಪಿಲಾತಬೆಟ್ಟು ಸಮೀಪದ ಪಿತ್ರೊಟ್ಟು ಎಂಬಲ್ಲಿ ಅಡಿಕೆ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಮೃತರನ್ನು ಪಿಲಾತಬೆಟ್ಟು ಗ್ರಾಮದ ನಯನಾಡು ಸಮೀಪದ ಪೂರ್ಲಿ ನಿವಾಸಿ ತಿಮ್ಮಪ್ಪಗೌಡ(48) ಎಂದು ಗುರುತಿಸಲಾಗಿದೆ.
ತಿಮ್ಮಪ್ಪಗೌಡ ಅವರು ಜ. 10ರಂದು ಪಿಲಾತಬೆಟ್ಟು ಸಮೀಪದ ಪಿತ್ರೊಟ್ಟು ಅಣ್ಣಿ ಪೂಜಾರಿ ಎಂಬವರ ತೋಟದಲ್ಲಿದ್ದ ಅಡಿಕೆ ಮರ ಏರಿದ್ದು, ಆಕಸ್ಮಿಕವಾಗಿ ಬಿದ್ದು ಗಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತಿಮ್ಮಪ್ಪ ಅವರ ಪುತ್ರ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story





