ಕಂದಾವರ ನಿವೇಶನ ರಹಿತರ ಗುಡಿಸಲು ನೆಲಸಮ ಖಂಡಿಸಿ ಧರಣಿ

ಕುಂದಾಪುರ, ಜ. 16: ಕಂದಾವರ ಗ್ರಾಮದ ಸಟ್ವಾಡಿಯ ಸರಕಾರಿ ಜಾಗ ದಲ್ಲಿ ವಾಸವಾಗಿದ್ದ 147 ನಿವೇಶನ ರಹಿತರ ಗುಡಿಸಲುಗಳನ್ನು ತೆರವುಗೊಳಿಸಿ ರುವ ಕುಂದಾಪುರ ತಹಶೀಲ್ದಾರ್‌ರ ಕ್ರಮವನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಯ ವತಿಯಿಂದ ಇಂದು ಕುಂದಾಪುರದ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಲಾಯಿತು.
ಕಷ್ಟಪಟ್ಟು ದುಡಿದು ಸಾಲ ಮಾಡಿ ನಿರ್ಮಿಸಿದ ಮನೆಗಳನ್ನು ನೆಲಸಮಗೊಳಿಸಿ ದ್ದಕ್ಕೆ ಸರಕಾರ ಸಂತ್ರಸ್ತರಿಗೆ ಕೂಡಲೇ ನಷ್ಟ ಪರಿಹಾರ ನೀಡಬೇಕು. ಅಲ್ಲದೆ ಬೇರೆ ಜಾಗದಲ್ಲಿ ನಿವೇಶನ ನೀಡಿ ಮನೆ ನಿರ್ಮಿಸಲು ಹಕ್ಕುಪತ್ರ ನೀಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ನಾಗರತ್ನ, ಸಿಐಟಿಯುನ ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಕೆ.ಶಂಕರ್, ಮಹಾಬಲ, ಶೀಲಾವತಿ, ರಮೇಶ್ ಗುಲ್ವಾಡಿ, ಪದ್ಮಾವತಿ ಶೆಟ್ಟಿ, ಕುಶಲ, ಕಾಂಚನಮಾಲ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಿಂದ ಕಾಲ್ನಡಿಗೆ ಜಾಥಾವನ್ನು ನಡೆಸಲಾಯಿತು.
Next Story





