ಬಾಲಕಿಯ ಮೇಲೆ ಇಬ್ಬರು ಬಾಲಕರಿಂದ ಅತ್ಯಾಚಾರ

ಗಾಝಿಯಾಬಾದ್, ಜ. 16: ಗಾಝಿಯಾಬಾದ್ ಹಿಂಡ್ಸನ್ ವಾಯು ನೆಲಯ ಕಾರ್ಮಿಕರ ಕ್ವಾರ್ಟರ್ಸ್‌ನಲ್ಲಿ ಇಬ್ಬರು ಬಾಲಕರು 13 ವರ್ಷದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಾಲಾಗಿದೆ.
ಶನಿವಾರ ಪ್ರಕರಣ ದಾಖಲಿಸಿರುವ ಬಾಲಕಿಯ ತಂದೆ 15 ಹಾಗೂ 16 ವಯಸ್ಸಿನ ಇಬ್ಬರು ಆರೋಪಿಗಳ ಹೆಸರು ಹೇಳಿದ್ದಾರೆ. ಬಾಲಕಿಯನ್ನು ಸೋಮವಾರ ವೈದ್ಯಕೀಯ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಆದರೆ, ಹೆತ್ತವರು ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಇಬ್ಬರು ಆರೋಪಿ ಬಾಲಕರ ವಿಚಾರಣೆ ನಡೆಸಿದ್ದೇವೆ. ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂಡ್ಸನ್ ವಾಯು ನೆಲೆಯ ಕಾರ್ಮಿಕರ ಕ್ವಾರ್ಟರ್ಸ್‌ನಲ್ಲಿ ಇಬ್ಬರು ಬಾಲಕರು ಪ್ರತ್ಯೇಕ ದಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
Next Story