ಫೇಸ್ ಟ್ರಸ್ಟ್‌ನಿಂದ ಯುವ ಸಾಂಸ್ಕೃತಿಕ ವೈಭವ

ಮಂಗಳೂರು, ಜ. 16: ಜಿಲ್ಲೆಯ ಗ್ರಾಮೀಣ ಭಾಗದ ಜನರು ಇಂದು ಸಾಂಸ್ಕೃತಿಕ ರಂಗದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಎಂದಾದರೆ ಅದಕ್ಕೆ ತುಳು ರಂಗಭೂಮಿ ಕಾರಣ ಎಂದು ತುಳು ನಾಟಕ ರಂಗದ ರಿಯ ಕಲಾವಿದ ವಸಂತ .ಅಮೀನ್ ತಿಳಿಸಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಫೇಸ್ ಟ್ರಸ್ಟ್ ಮಂಗಳೂರು ಮತ್ತು ಲಯನ್ ಮತ್ತು ಲಯನೆಸ್ ಕ್ಲಬ್ ಮಂಗಳಾದೇವಿ ಇವರ ಆಶ್ರಯದಲ್ಲಿ ಪುರಭವನದಲ್ಲಿ ನಡೆದ ಗಾನ-ನಾಟ್ಯ-ನಾಟಕ ಸಮಾಗಮ ಯುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಿಜಿಸ್ಟಾರ್ ಚಂದ್ರಹಾಸ್ ರೈ, ಫೇಸ್ ಸಂಸ್ಥೆಯ ನಿರ್ದೇಶಕ ನರೇಶ್ ಕುಮಾರ್ ಸಸಿಹಿತ್ಲು, ಟ್ರಸ್ಟಿಗಳಾದ ಬಾಲಕೃಷ್ಣ ಪೂಜಾರಿ, ಪ್ರದೀಪ್ ಎಸ್.ಆರ್., ಶಕಿಲಾ ನರೇಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಪಡೆದ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ ಮತ್ತು ಉತ್ತಮ ಸಂಘಟಕ ದ.ಕ. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವಾಸ್ ಗುರುಪುರ ಮತ್ತು ಬಳಗದವರಿಂದ ಹಳೆ ಗೀತೆಗಳ ಗಾಯನ, ರಜತ್ ಮತ್ತು ಬಳಗದವರಿಂದ ನೃತ್ಯ ಮತ್ತು ತುಳುವೆರೆ ತುಡಾರ್ ಕಲಾತಂಡ ಸುರತ್ಕಲ್ ಇವರಿಂದ ತುಳು ನಾಟಕ ನಡೆಯತು. ತಿಲಕ್ ರಾಜ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಗಾನ-ನಾಟ್ಯ-ನಾಟಕ ಸಮಾಗಮ ಯುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡಮಿ ಪ್ರಶಸ್ತಿ ಪಡೆದ ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ ಮತ್ತು ಉತ್ತಮ ಸಂಘಟಕ ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅವರನ್ನು ಸನ್ಮಾನಿಸಲಾಯಿತು.





