ರಾಜ್ಯ ಯುವಜನ ಮೇಳ: ಸಮಾಲೋಚನಾ ಸಭೆ

ಪುತ್ತೂರು,ಜ.16: 7000 ಕಲಾವಿದರ ಸಂಗಮದೊಂದಿಗೆ, 75 ಲಕ್ಷ ರೂ.ವೆಚ್ಚದಲ್ಲಿ ಪುತ್ತೂರಿನಲ್ಲಿ ಸೃರಾಜ್ಯ ಮಟ್ಟದ ಯುವಜನ ಮೇಳ ಆಯೋಜಿಸಲು ಈ ಬಾರಿ ಪುತ್ತೂರಿಗೆ ಅವಕಾಶ ದೊರೆತಿದ್ದು, ಯುವಜನ ಮೇಳ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಪುತ್ತೂರಿನ ಬ್ರಹ್ಮಶ್ರೀ ಗುರುನಾರಾಯಣ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಅಂದಾಜು 75 ಲಕ್ಷ ರೂ.ವೆಚ್ಚದಲ್ಲಿ ನಡೆಯಲಿರುವ ಮೇಳಕ್ಕೆ ಇಡೀ ರಾಜ್ಯದಿಂದ ಸುಮಾರು 7000 ಮಂದಿ ಕಲಾವಿದರು ಆಗಮಿಸಲಿದ್ದಾರೆ. ಇದಕ್ಕಾಗಿ ಸುದಾನ ವಸತಿಯುತ ಶಾಲೆಯ ಆವರಣವನ್ನು ಆಯ್ಕೆ ಮಾಡಲಾಗಿದೆ. ಊಟೋಪಚಾರ, ವಸತಿ ಯೋಜನೆಯ ವ್ಯವಸ್ಥೆಯಲ್ಲಿ ಪೂರ್ವಯೋಜಿತ ಸಿದ್ದತೆಯ ಬಗ್ಗೆ ಚರ್ಚಿಸಲಾಯಿತು. ಆರ್ಥಿಕ ಕ್ರೋಢೀಕರಣಕ್ಕಾಗಿ ಪುತ್ತೂರಿನ ಹಲವು ಮಂದಿ ಪ್ರಮುಖರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಶಾಸಕಿ ಶಕುಂತಳಾ ಟಿ. ಶೆಟ್ಟಿಯವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಬಗ್ಗೆ ಸಲಹೆ ನೀಡಿದರು.
ಜಿ.ಪಂ ಸದಸ್ಯರಾದ ಪಿ.ಪಿ.ವರ್ಗಿಸ್, ಅನಿತಾ ಹೇಮನಾಥ ಶೆಟ್ಟಿ, ಶಯನಾ ಜಯಾನಂದ, ಪ್ರಮೀಳಾ ಜನಾರ್ಧನ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ಸುದ್ದಿ ಸಮೂಹ ಸಂಸ್ಥೆ ಯ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಡಿ'ಸೋಜ ಮತ್ತಿತರರು ಉಪಸ್ಥಿತರಿದ್ದರು.





