ವಿದ್ಯುತ್ ಶಾರ್ಟ್ ಸರ್ಕ್ಯೂಟ್ : ರಬ್ಬರ್ ತೋಟ ಬೆಂಕಿಗಾಹುತಿ
ಪುತ್ತೂರು,ಜ.16: ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಸಮೀಪದ ದೇರಾಜೆ ಭಾಸ್ಕರ ರೈ ಎಂಬವರ ರಬ್ಬರ್ ತೋಟ ಬೆಂಕಿಗಾಹುತಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹಿಡಿದಿದ್ದು ಸುಮಾರು 8 ರಿಂದ 10 ವರ್ಷದೊಳಗಿನ 800 ಕ್ಕೂ ಅಧಿಕ ರಬ್ಬರ್ ಮರಗಳು ಬೆಂಕಿಗಾಹುತಿಯಾಗಿವೆ. ಮರಗಳಿಂದ ಹಾಲು ತೆಗೆಯಲಾಗುತ್ತಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಗ್ನಿ ಶಾಮಕ ದಳದವರ ಸಕಾಲಿಕ ಕಾರ್ಯಾಚರಣೆಯಿಂದ ಎರಡು ವಾಹನಗಳನ್ನು ಬಳಸಿ ಬೆಂಕಿ ನಂದಿಸಲಾಗಿದೆ. ಬೆಂಕಿ ನಂದಿಸುವಲ್ಲಿ ಸ್ಥಳೀಯರು ಸಹಕಾರ ನೀಡಿದ್ದರು.
Next Story





