ಬೈಕ್ ಢಿಕ್ಕಿ : ತಾಯಿ ಮಗಳಿಗೆ ಗಾಯ
ಪುತ್ತೂರು,ಜ.16: ಬೈಕೊಂದು ಢಿಕ್ಕಿಯಾಗಿ ಪಾದಚಾರಿಗಳಿಬ್ಬರು ಗಾಯಗೊಂಡ ಘಟನೆ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪುವಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಂಜಲ್ಪಡ್ಪು ಸಮೀಪ ಡಾಮಾರು ರಸ್ತೆಯಲ್ಲಿ ಬರುತ್ತಿದ್ದ ಬೈಕ್ ರಸ್ತೆ ದಾಟಲು ಯತ್ನಿಸುತ್ತಿದ್ದ ತಿಲಕಾವತಿ ಮತ್ತು ಅವರ ಪುತ್ರಿ ಕೀರ್ತನಾ(13ವ) ಅವರಿಗೆ ಡಿಕ್ಕಿಯಾಗಿದೆ. ಗಾಯಾಳು ತಾಯಿ ಮತ್ತು ಮಗಳು ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story