ಖಾಸಗಿ ಕಂಪೆನಿ ನೌಕರನ ಬೆದರಿಸಿ ದರೋಡೆ
ಬೆಂಗಳೂರು, ಜ.17: ಬೈಕ್‌ನಲ್ಲಿ ಸಾಗುತ್ತಿದ್ದ ಖಾಸಗಿ ಕಂಪೆನಿ ನೌಕರನೊಬ್ಬನನ್ನು ಆರು ಮಂದಿ ದರೋಡೆಕೋರರು ಅಡ್ಡಗಟ್ಟಿ ಬೆದರಿಸಿ 4 ಸಾವಿರ ರೂ. ನಗದು, ವಾಚ್ ಮತ್ತು ಮೊಬೈಲ್‌ಅನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಮಲಾನಗರ ನಿವಾಸಿಯಾಗಿರುವ ಬಾಬು ಎಂಬುವರು, ಮಂಗಳವಾರ ರಾತ್ರಿ ಸ್ನೇಹಿತನನ್ನು ಮನೆಗೆ ಬಿಟ್ಟು ವಾಪಸ್ಸು ಆಗುತ್ತಿದ್ದಾಗ ಮುದ್ದಯ್ಯನಪಾಳ್ಯ ಮುಖ್ಯರಸ್ತೆಯ ರಿಲಯನ್ಸ್ ಪಾಯಿಂಟ್ ಬಳಿ ಆರು ಮಂದಿ ದರೋಡೆಕೋರರು ಹಿಂಬಾಲಿಸಿ ಬಂದು ಅಡ್ಡ ಹಾಕಿದ್ದಾರೆ ಎನ್ನಲಾಗಿದೆ.
ಬಾಬು ಅವರು ಬೈಕ್ ನಿಲ್ಲಿಸುತ್ತಿದ್ದಂತೆ ಆರು ಮಂದಿ ದರೋಡೆಕೋರರು ಸುತ್ತುವರೆದು ಬೆದರಿಸಿ ಅವರ ಬಳಿಯಿಂದ ಹಣ, ಮೊಬೈಲ್, ವಾಚನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





