ನೇರ ತೆರಿಗೆ ಸಂಗ್ರಹ ಶೇ.19ರಷ್ಟು ಏರಿಕೆ

ಹೊಸದಿಲ್ಲಿ,ಜ.17: ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತೂವರೆ ತಿಂಗಳುಗಳಲ್ಲಿ ನೇರ ತೆರಿಗೆ ಸಂಗ್ರಹವು 6.89 ಲ.ಕೋ.ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.18.7 ಏರಿಕೆಯನ್ನು ದಾಖಲಿಸಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಬುಧವಾರ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 9.89 ಲ.ಕೋ.ರೂ.ನೇರ ತೆರಿಗೆ ಆದಾಯ ಗುರಿಯನ್ನು ಹೊಂದಲಾಗಿದ್ದು, 2018 ಜನವರಿ 15ರವರೆಗೆ ಇದರ ಶೇ.70ರಷ್ಟು ಮೊತ್ತ ಸಂಗ್ರಹವಾಗಿದೆ ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
2017,ಎಪ್ರಿಲ್‌ನಿಂದ 2018 ಜ.15ರವರೆಗೆ ಒಟ್ಟು ತೆರಿಗೆ ಸಂಗ್ರಹ(ವಾಪಸಾತಿ ಹೊಂದಾಣಿಕೆಗಳ ಮುನ್ನ) ಶೇ.13.5ರಷ್ಟು ಏರಿಕೆಯಾಗಿ 8.11 ಲ.ಕೋ.ರೂ.ಗೆ ತಲುಪಿದ್ದು, ಈ ಅವಧಿಯಲ್ಲಿ 1.22 ಲ.ಕೋ.ರೂ.ಗಳನ್ನು ವಾಪಸ್ ಮಾಡಲಾಗಿದೆ ಎಂದು ಮಂಡಳಿಯು ಹೇಳಿದೆ.
Next Story





