ದಿಲ್ಲಿ:ಪೋಷಕರಿಗೆ ತರಗತಿಗಳ ನೇರ ಸಿಸಿಟಿವಿ ಫೂಟೇಜ್ ಸೌಲಭ್ಯ

ಹೊಸದಿಲ್ಲಿ,ಜ.17: ದಿಲ್ಲಿಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರು ಪಾರದರ್ಶಕತೆ ಮತ್ತು ತಮ್ಮ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತರಗತಿಗಳ ಸಿಸಿಟಿವಿ ಫೂಟೇಜ್‌ನ್ನು ನೇರವಾಗಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ವೀಕ್ಷಿಸುವ ಸೌಲಭ್ಯ ಹೊಂದಲಿದ್ದಾರೆ.
ಬುಧವಾರ ಟ್ವೀಟ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಎಲ್ಲ ಸರಕಾರಿ ಶಾಲೆಗಳ ಪ್ರತಿಯೊಂದು ತರಗತಿ ಕೋಣೆಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆಯ ಪ್ರಗತಿಯನ್ನು ತಾನು ಪುನರ್ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.
Next Story