ಉಡುಪಿ: ಸ್ವಚ್ಛತೆ ಸಂದೇಶಕ್ಕೆ ಯಕ್ಷಗಾನ ರೂಪಕ

ಉಡುಪಿ, ಜ.17: ಜಿಲ್ಲಾಡಳಿತದ ಸ್ವಚ್ಛತೆಯ ಸಂದೇಶವನ್ನು ಪಸರಿಸಲು, ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಂಗೀತ ಮತ್ತು ನಾಟಕ ವಿಭಾಗದ ಸಹಕಾರದಿಂದ ಯಕ್ಷಗಾನ ರೂಪಕವನ್ನು ರೋಟರಿ ಉದ್ಯಾವರ ಬುಧವಾರ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮ ಸಂಬಂಧ ಆಯೋಜಿಸ ಲಾದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಉದ್ಯಾವರದ ಪಿ. ತೇಜೇಶ್ವರ್ ರಾವ್ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಸಂಚಾಲಕ ನಾಗೇಶ್ ಉದ್ಯಾವರ, ರೋಟರಿ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಮದ್ದೋಡಿ, ಯಕ್ಷದೇಗುಲದ ಬೆಂಗಳೂರಿನ ವ್ಯವಸ್ಥಾಪಕ ಸುದರ್ಶನ್ ಉರಾಳ, ಶಿಕ್ಷಕ ರಕ್ಷಕ ಸಂಘದ ಅ್ಯಕ್ಷೆಪೂರ್ಣಿಮಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್ ಉಪಸ್ಥಿತರಿದ್ದರು. ಶಂಕರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದಭರ್ದಲ್ಲಿ ರೋಟರಿ ಕ್ಲಬ್ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್ ಬರ್ನರ್‌ನ್ನು ಕೊಡುಗೆಯಾಗಿ ನೀಡಿತಲ್ಲದೇ, ಇತ್ತೀಚೆಗೆ ನಿಧನರಾದ ಯಕ್ಷ ಕಲಾವಿದರ ಪತ್ನಿ ಹಾಗೂ ಮರದಿಂದ ಬಿದ್ದು ಅನಾರೋಗ್ಯಕ್ಕೀಡಾದವರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿತು.







