ಜ. 20: ಕಾಟುಕುಕ್ಕೆಯಲ್ಲಿ ಶ್ರೀನಿವಾಸನಿಗೆ ಮಹಾಮಂಗಲೋತ್ಸವ
ಪುತ್ತೂರು, ಜ. 17: ಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಇದರ ದಶಮಾನೋತ್ಸವದ ಅಂಗವಾಗಿ ಭಜಕರ ಸಹಕಾರದೊಂದಿಗೆ ನಡೆಯಲಿರುವ ಶ್ರೀನಿವಾಸ ಮಹಾಮಂಗಲೋತ್ಸದ ಕಾರ್ಯಕ್ರಮಗಳು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪ್ರಾರಂಭಗೊಂಡಿದ್ದು ಜ.20ರಂದು ಶ್ರೀನಿವಾಸ ಮಹಾಮಂಗಲೋತ್ಸವ ಹಾಗೂ ದಾಸಸಂಕೀರ್ತನಯಾನದ 500ನೇ ಸಂಭ್ರಮದ ಲೋಕಾರ್ಪಣೆಯು ನಡೆಯಲಿದೆ ಎಂದು ಆರಾಧನೋತ್ಸವ ಸಮಿತಿ ಪ್ರಧಾನ ಸಂಚಾಲಕ ರಾಮಕೃಷ್ಣ ಕಾಟುಕುಕ್ಕೆ ತಿಳಿಸಿದ್ದಾರೆ
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜ.19ರಂದು ಆಯ್ದ ಭಜನಾ ತಂಡಗಳಿಂದ ಭಜನೆ, ಸಂಜೆ ಕೀರ್ತನಾ ಕುಟೀರ ಕುಂಬಳೆ ಇದರ ಸಂಚಾಲಕ ಕಲಾರತ್ನ ಶಂನಾಡಿಗ ರವರಿಂದ ಅಕ್ಷರಪಾತ್ರ ಎಂಬ ಹರಿಕೀರ್ತನೆ ನಡೆಯಲಿದೆ. ಜ.20ರಂದು ಬೆಳಿಗ್ಗೆ ಭಜನಾ ಸಂಕೀರ್ತನೆ ಹಾಗೂ ಬೊಳುವಾರು ವೈಷ್ಣವಿ ವೈದೇಹಿ ಭಜನಾ ಮಂಡಳಿಗಳ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀಶೋಭಾನೆ ಪಾರಾಯಣ ನಡೆಯಲಿದೆ. ಬಳಿಕ ದಾಸ ಸಂಕೀರ್ತನಾ ಯಾನದ 500 ಸಂಭ್ರಮದ ಲೋಕಾರ್ಪಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ. ಎಡನೀರು ಮಠದ ಶ್ರೀ ಕೇಶವಾನಂದ ಸ್ವಾಮಿಜಿಯವರು ಆಶೀರ್ವಚನ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಕುಂಟಾರು ರವೀಶ ತಂತ್ರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶಕುಂತಳಾ ಟಿ ಶೆಟ್ಟಿ, ಉದುಮ ಶಾಸಕ ಕೆ ಕುಂಞಿರಾಮನ್, ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ್ ಪಿಲಿಂಗಲ್ಲು, ಪ್ರಧಾನ ಅರ್ಚಕ ನಾರಾಯಣ ಮಯ್ಯ, ಬದಿಯಡ್ಕ ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಜಿ.ಪಂ ಮಾಜಿ ಸದಸ್ಯ ಶಂಕರ್ ರೈ ಮಾಸ್ತರ್, ಸ್ವಾಗತ ಸಮಿತಿ ಅಧ್ಯಕ್ಷ ಮಿತ್ತೂರು ಪುರುಷೋತ್ತಮ ಭಟ್, ಎಣ್ಮಕಜೆ ಗ್ರಾ.ಪಂ ಸದಸ್ಯೆ ಮಲ್ಲಿಕಾ ಜೆ ರೈ, ರೈಎಸ್ಟೇಟ್ & ಚಾರಿಟೇಬಲ್ ಟ್ರಸ್ಟ್ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ ಜಗನ್ನಿವಾಸ ರಾವ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕಲ್ಯಾಣೋತ್ಸವ ಸಮಿತಿ ಅರಸಿನಮಕ್ಕಿ ಅಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಮುಂಬಯಿ ಉದ್ಯಮಿಗಳಾದ ಸುಧಾಕರ ಕುಮಾರ್, ಚಿತ್ತರಂಜನ್ ಶೆಟ್ಟಿ ನುಳಿಯಾಲು ಗುತ್ತು, ಚಂದ್ರಶೇಖರ ಶೆಟ್ಟಿ ಕುಕ್ಕಂದೂರು ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 15ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ತಿರುಪತಿಯಿಂದ ಶ್ರೀನಿವಾಸ ಹಾಗೂ ಪದ್ಮಾವತಿ ದೇವಿಯರನ್ನು ಆಹ್ವಾನಿಸಿಕೊಂಡು ವಿವಾಹ ನೆರವೇರಿಸುವ ಅಪರೂಪದ ಕಾರ್ಯಕ್ರಮ ಜ.20ರಂದು ಅಪರಾಹ್ನ ಕ್ಷೇತ್ರದಲ್ಲಿ ನಡೆಯಲಿದೆ. ತಿರುಪತಿಯಿಂದ ಆಗಮಿಸಿವ ಭೂದೇವಿ ಹಾಗೂ ಶ್ರೀನಿವಾಸ ದೇವರನ್ನು ಅಡ್ಕಸ್ಥಳದಿಂದ ಕಾಟುಕುಕ್ಕೆ ದೇವಸ್ಥಾನದ ತನಕ ಶೋಭಾಯಾತ್ರೆಯ ಮೂಲಕ ತರಲಾಗುವುದು. ದೇವರ ಆಗಮನದ ಬಳಿಕ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ದಾಸ ಸಾಹಿತ್ಯದ ಪದ್ದತಿಯಲ್ಲಿ ಮಠಾಧಿಪತಿಗಳು, ಸಾಮಾಜಿಕ ದುರೀಣರು ಭಾಗವಹಿಸುವಿಕೆಯಲ್ಲಿ ಸಂಜೆ ವೇಳೆಗೆ ಮಹಾಮಂಗಲೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರಾಧನೋತ್ಸವ ಸಮಿತಿ ಗೌರವ ಸಲಹೆಗಾರ ನನ್ಯ ಅಚ್ಚುತ ಮೂಡೆತ್ತಾಯ, ಖಜಾಂಜಿ ಕಿರಣ್ ಕುಮಾರ್ ಶೆಟ್ಟಿ. ಭಜನಾ ಮಂಡಳಿ ಅಧ್ಯಕ್ಷೆ ಪರಮೇಶ್ವರಿ ಮತ್ತು ಸದಸ್ಯೆ ಉಮಾರಾವ್ ಉಪಸ್ಥಿತರಿದ್ದರು.







