ಗೂಡ್ಸ್ ಆಟೋಗೆ ಬೈಕ್ ಢಿಕ್ಕಿ: ಮಹಿಳೆ ಮೃತ್ಯು
ಮೈಸೂರು,ಜ.17: ಹಾಲಿನ ಗೂಡ್ಸ್ ಆಟೋ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಳ ಪತಿ ಹಾಗೂ ಮೂವರು ಮಕ್ಕಳು ಘಟನೆಯಲ್ಲಿ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಅಜ್ಜಿಪುರದ ಕುರುಬರದೊಡ್ಡಿ ಗ್ರಾಮದ ನಿವಾಸಿ ಸಲ್ಮಾಬಾನು(30) ಮೃತ ಮಹಿಳೆ. ಪತಿ, ಪತ್ನಿ ಹಾಗೂ ಮೂವರು ಚಾಮರಾಜನಗರದಿಂದ ಮೈಸೂರಿಗೆ ಬೈಕ್‍ನಲ್ಲಿ ಬರುವಾಗ ಈ ಅವಘಡ ಸಂಭವಿಸಿದೆ.
ಮೈಸೂರು-ಟಿ.ನರಸೀಪುರ ರಸ್ತೆಯ ವರುಣ ಕೆರೆ ಬಳಿ ಬೈಕ್‍ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟರೆ, ಆಕೆಯ ಪತಿ ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
Next Story





