ವೀರಶೈವ-ಲಿಂಗಾಯುತ ಪ್ರತ್ಯೇಕ ಪಿಡುಗು ಎಲ್ಲಿ ಸೃಷ್ಟಿಯಾಯಿತೋ ಗೊತ್ತಿಲ್ಲ: ವಿ.ಸೋಮಣ್ಣ

ಮೈಸೂರು,(ಸುತ್ತೂರು),ಜ.17: ವೀರಶೈವ- ಲಿಂಗಾಯತ ಪ್ರತ್ಯೇಕ ಎಂಬ ಪಿಡುಗು ಎಲ್ಲಿ ಸೃಷ್ಟಿಯಾಯಿತೋ ಗೊತ್ತಿಲ್ಲ. ಈ ನಾಡಿನ ಬಹುಸಂಖ್ಯಾತರನ್ನು ವಿಭಜಿಸಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಎಲ್ಲ ವರ್ಗಗಳ ಸ್ವಾಮೀಜಿಗಳನ್ನು ಆಹ್ವಾನಿಸಿ ಇಲ್ಲಿ ವೇದಿಕೆ ಕಲ್ಪಿಸಿದ್ದಾರೆ. ಅದನ್ನು ಅರಿತು ಎಲ್ಲರೂ ಒಟ್ಟಾಗಿ ಹೋಗುವ ಅವಶ್ಯಕತೆ ಇದೆ. ಆ ಮೂಲಕ ಈಗಿರುವ ಧರ್ಮವನ್ನೇ ಪಾಲಿಸಬೇಕಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪುಗಳಾಗುತ್ತವೆ. ಅವನ್ನು ಮರೆತು ಜೊತೆಯಾಗಿ ಸಾಗಬೇಕು ಎಂದರು.
Next Story





